ಸಮರತೂರ್ಯವು ಮೊಳಗಿ

ಸಮರತೂರ್ಯವು ಮೊಳಗಿ ವಿಜಯಭೇರಿಯು ಗುಡುಗಿ ಹೇಡಿಗಳ ವೀರರಾಗಿಸುವ ಹೊತ್ತು ವಿಸ್ಮೃತಿಯ ಗುಹೆಯಿಂದ ಕೇಸರಿಯೆ ಹೊರಹೊರಡು ವಿಶ್ವವನೆ ಗೆಲ್ಲುವಾಕಾಂಕ್ಷೆ ಹೊತ್ತು || ಪ || ಸಮರಾಂಗಣದ ನಡುವೆ ಸಾವಿರಲಿ ನೋವಿರಲಿ ನೋಡದಿರು ಓಡದಿರು ಸರಿದು ಹಿಂದೆ ಕಲ್ಲೆದೆಯ ಕಡುಗಲಿಯೆ ಸಾಗು ರಣಕೇಸರಿಯೆ ಜಯಪರಂಪರೆಯ ಸಾಧಿಸುತ ಮುಂದೆ || 1 || ಅಂಜುವುದು ಅಳುಕುವುದು ಹಿಂಜರಿದು ಕೂರುವುದು ಗಂಡೆದೆಗೆ ತರವಲ್ಲ ಸಮರವೀರ ಬಾಳಿನುದ್ದಕು ಹೆಜ್ಜೆ ಹೆಜ್ಜೆಗೂ ಹೋರಾಟ ನಡೆಸಿ ವಿಶ್ವವನೆ ಬದಲಿಸುವ ಬಾರ || 2 || ಉಂಡುಟ್ಟು ಅದಕೆಂದೆ […]

Read More