ದೇಶ ಪ್ರೇಮದ ವೀರಘೋಷಣೆ ಮೊಳಗಲಿ

ದೇಶ ಪ್ರೇಮದ ವೀರಘೋಷಣೆ ಮೊಳಗಲಿ ನಾಡಿನೊಡಲಿನ ಸುಪ್ತ ಶಕ್ತಿ ಮಿನುಗಲಿ ಹೊಮ್ಮಲಿ ಹೊರಹೊಮ್ಮತಾ ಚಿಮ್ಮಲು ಬಾನೆತ್ತರ ಸಂಘೋದ್ಘೋಷ ಮನದಲಿ ಸಂಘೋದ್ಘೋಷ || ಪ || ಕರ್ಮಸಾಧನೆಗೈವ ಹಿಂದು, ಮುಂದೆ ಮುಂದೆ ಸಾಗಲಿ ಶ್ರೇಷ್ಠವೃತವ ಮನದಲಿರಿಸಿ ದುಷ್ಟಶಕ್ತಿಯ ಮೆಟ್ಟಲಿ ರುಧಿರವೆಲ್ಲ ಯಜ್ಞದಲ್ಲಿ ಉರಿದು ಉರಿದು ಹೋಗಲು ಸಂಘೋದ್ಘೋಷ ಬದುಕಲಿ ಸಂಘೋದ್ಘೋಷ || 1 || ಸ್ವಾರ್ಥ ಬದುಕಿನ ಬವಣೆ ನೀಗುತ, ರಾಷ್ಟ್ರ ಭಾವನೆ ಗಳಿಸುತಾ ಹೆಜ್ಜೆ-ಹೆಜ್ಜೆಗೂ ಸೇವೆಗೈಯುತಾ, ಶತ್ರು ಹೃದಯವೆ ಗೆಲ್ಲುತಾ ಶಕ್ತಿಯೆಲ್ಲಾ ರಾಷ್ಟ್ರಕಾರ್ಯಕೆ ಸರ್ವರರ್ಪಣೆಯಾಗಲು ಸಂಘೋದ್ಘೋಷ ಹೃದಯದಿ […]

Read More

ವಿಜಯ ದುಂದುಭಿ

ವಿಜಯ ದುಂದುಭಿ ಮೊಳಗಲಿ ಹೃದಯದಂಬುಧಿ ಮೊರೆಯಲಿ ಧ್ಯೇಯ ಸೂರ್ಯನ ದಿವ್ಯ ಕಿರಣವು ಭರತ ಭೂಮಿಯ ಬೆಳಗಲಿ ವಿಶ್ವವೇ ತಲೆಬಾಗಲಿ || ಪ || ಜಡತೆ ನೀಗುತ ಸತತ ಸಾಗುವ ರಣೋತ್ಸಾಹವ ಮೂಡಿಸಿ ನಾಡನೊಡೆಯುವ ಸಂಚು ಹೂಡಿಹ ಶತ್ರುಗಳ ಬಡಿದೋಡಿಸಿ || 1 || ಸೋಲನೊಲ್ಲದೆ ನಡಿಗೆ ನಿಲ್ಲದೆ ಗೆಲುವಿನ ಗುರಿ ಸೇರುತ ಹಿಂದು ಭೂಮಿಯ ಕ್ಷಾತ್ರ ತೇಜವ ದಿಗ್ದಿಗಂತಕೆ ಬೀರುತ || 2 || ತರುಣ ಶಕ್ತಿಯದಮ್ಯ ಸ್ಫೂರ್ತಿಗೆ ಸಾಟಿ ಎಲ್ಲಿದೆ ಧರೆಯಲಿ ? ಭಾರತಾಂಬೆಯ ಜಯಪತಾಕೆಯು […]

Read More