ಎತ್ತರಕೇರಿಸಿ ಭಗವಾಧ್ವಜವ

ಎತ್ತರಕೇರಿಸಿ ಭಗವಾದ್ವಜವ ಧರ್ಮದ ಮಹಿಮೆಯ ಮೆರೆಯಿಸುವಾ | ಉತ್ತರವೀಯುತ ಯುಗದ ಸವಾಲಿಗೆ ನವ ಇತಿಹಾಸವ ನಿರ್ಮಿಸುವಾ || ಪ || ಅಂಕೆಯ ಮೀರಿದ ದುರಹಂಕಾರದಿ ಮೆರೆದಿರಲಂದು ರಾವಣನು ಬೆಂಕಿಯ ಬಲೆಯೊಳು ಲಂಕಾ ನಗರಿಯ ಉರಿಸಿದ ಅಂಜನಿ ನಂದನನು ಪಟ್ಟವ ಕಟ್ಟಿ ವಿಭೀಷಣಗಂದು ಧರ್ಮವ ಮೆರೆಸಿದ ರಾಘವನು ತ್ಯಜಿಸುತ ಸುರವೈಭೋಗವನು || 1 || ದುಷ್ಟಕೌರವರ ಅಕ್ಷೋಹಿಣಿಬಲ ಪಡೆದಿರೆ ಸಜ್ಜನರಾಹುತಿಯ ಸೃಷ್ಟಿಯ ಭಾರವ ನೀಗಿದ ಕೃಷ್ಣನು ತೊಡೆಯುತ ದುರ್ಜನ ಸಂತತಿಯ ವಿಜಯದ ಶಂಖೋದ್ಘೋಷವು ಮೊಳಗಿತು ಸಾರುತ ಧರ್ಮದ ಉನ್ನತಿಯ […]

Read More