ಹೃದಯ ಸಿಂಹಾಸನದ ಮೇಲೇರು ಬಾ ದೇವಿ – ಓ ಭಾರತದ ಸ್ವಾತಂತ್ರ್ಯದಧಿ ದೇವಿ ! ದಾಸ್ಯ ಶೃಂಖಲೆಯೆಲ್ಲ ನಿನ್ನಂಘ್ರಿ ಸ್ಪರ್ಶಕ್ಕೆ ಸಿಡಿದೊಡೆದು ಬೀಳುವುದು ಸೀಳು ಹೋಳಾಗಿ || ಪ || ಅಡಿಯಿಡಲು ಎಡೆದೊರೆಯದೆಂದು ಬೆದರುವೆಯೇಕೆ ಎಡೆಗೊಡರು ದ್ರೋಹಿಗಳು ಎಂಬ ಭಯವೇನು ? ಅಡಿಗೊಂದು ತಲೆ ಬುರುಡೆ ಬಲಿನೀಡಿ ನಡೆಸುವೆವು ಭಯವೇಕೆ ಬಾರಮ್ಮ ಬೆದರೆದೆಯೆ ನೀನು || 1 || ಪಟ್ಟಿಹೆವು ಕಡು ಕಷ್ಟ ಪಟ್ಟ ಕಟ್ಟಲು ನಿನಗೆ ಬೇಗನೀ ಬಲಿಪೀಠದಾ ಮೆಟ್ಟಿಲೇರಿ ಬಿಡು ದಿಟ್ಟತನದಿಂದಡಿಯ ಮುಂದಿಟ್ಟು ದುಷ್ಟರನು […]