ಮೈ ಮರೆತಭಿಮಾನವು

ಮೈ ಮರೆತಭಿಮಾನವು ಮೈ ಕೊಡಹುತ ಮೇಲೇಳುತಿದೆ ಮರುತನ ಸ್ವರದಲಿ ನವ ರಾಗೋದಯದುಲಿ ಕೇಳುತಿದೆ || ಪ || ಅಳಲಿನ ನಿಶೆ ಅಳಿಯಿತು ಅಳುತಳುತೆ, ಮೊಳಗಿತಿದೋ ಮುಂಜಾವಿನ ಗೀತೆ ಜೀವನಕುಸುಮಗಳರಳಿರೆ ನಗುತೆ, ರುಧಿರಾರ್ಚನೆಗಿನ್ನಾವುದು ಕೊರತೆ? ಇತಿಹಾಸದ ಕಥೆ, ಉಪಹಾಸದ ವ್ಯಥೆ ಮೈತಾಳುತಿದೆ || 1 || ಹಾರಿದ ಭರವಸೆಗಳ ಖಗಕುಲವು, ಹೃದಯದ ಗೂಡಿಗೆ ಮರಳುತಲಿಹುದು ಬಾಳಡಿಯಲಿ ಸಾಯುತಲಿರೆ ಸಾವು ಬಗೆ ಬೆದರದು ಬಳಿ ಸುಳಿಯದು ನೋವು ಕರ್ಬೊಗೆ ಗಾಳಿಗೆ ಕರಗುವ ಬಗೆ ಹಗೆ ಹಿಂದೋಡುತಿದೆ || 2 || […]

Read More