ಯುವಶಕ್ತಿಯು ಮೈಕೊಡುವುತ ಮೇಲೆದ್ದರೆ ಇನಿಸು | ನವರಾಷ್ಟ್ರದ ನಿರ್ಮಾಣದ ಕನಸಾಗದೆ ನನಸು || || ಪ || ಹದಿಹರೆಯದ ಭಾವನೆಗಳು ಕೋಮಲತೆಯ ಕಂತೆ ಬಿಸಿಲಾದರೂ ತಂಪಾದರೂ ಅರಳದ ಮೊಗ್ಗಂತೆ | ಸರಿದಾರಿಯ ಮೇಲ್ಪಂಕ್ತಿಯ ತೋರಿಸದಿಹ ಕೊರತೆ ಬರಿದಾಗಿಸಿ ಬಾಳುದ್ದಕೂ ಸೊರಗಿಸುವುದೇ ಚಿಂತೆ || || 1 || ಧನ್ಯತೆಯಲಿ ಬಾಳಿದ ಹಿರಿಜೀವದ ಸಂಯೋಗ ಶೂನ್ಯತೆಯನು ಕಳೆಯುತ ಗುರಿ ಮುಟ್ಟುವ ಸನ್ಮಾರ್ಗ ಸಾಧನೆಯನು ಗೈಯುತ ಮನ ತುಂಬಲಿ ಉತ್ಸಾಹ ಈ ಧರೆಯನು ಸಾರ್ಥಕದೆಡೆ ಒಯ್ಯಲಿ ಈ ದೇಹ || […]