ಐಕ್ಯತೆಯು ಮಣ್ಗೂಡಿ ಭಾರತಿಯು ಬಳಲಿರಲು

ಐಕ್ಯತೆಯು ಮಣ್ಗೂಡಿ ಭಾರತಿಯು ಬಳಲಿರಲು ನಿನಗೊಬ್ಬನಿಗೆ ಮಾತ್ರ ಬರಲಿಲ್ಲ ನಿದ್ದೆ ಗಾಳಿಯನು ಸೀಳಿ ಬಹ ಸುಯ್ಯೆಲರ ಶಬ್ದಕ್ಕೆ ಸುಖದ ಸುಪ್ಪತ್ತಿಗೆಯನೊದ್ದೆ ಮೇಲೆದ್ದೆ || ಪ || ಮೈಮರೆತ ಸೋದರರ ನಾಯಪಾಡನು ನೋಡಿ ಬೆಂಕಿ ಹೊತ್ತಿದ ಹೃದಯ ತಳಮಳಿಸಿತೇನು? ತಾಯ್ನೆಲದ ಕಡುಮಮತೆ ತಿದಿಯನೊತ್ತಿದ ಹಾಗೆ ಒಡಲೊಳಗೆ ಕರುಳ ಕುಡಿ ಮಿಡುಕಾಡಿತೇನು || 1 || ಜಗವೆಲ್ಲ ಜಡವಾಗಿ ಮಲಗಿ ನಿದ್ರಿಸಿದಂದು ನಟ್ಟಿರುಳಿನೊಳಗೊಬ್ಬನೇ ನಡೆದೆ ಮುಂದೆ ಒಬ್ಬೊಬ್ಬ ಬಂಧುವನೆ ಮೇಲಕೆಬ್ಬಿಸಿ ತಂದು ಸಂಘ ಸಂಜೀವಿನಿಯ ಸ್ವೀಕರಿಸಿರೆಂದೆ || 2 || […]

Read More