ಮನದಿ ಮಂದಾಸನವನಿತ್ತಿಹೆ ಮಾತೆ ಮೋದದಿ ಮಂಡಿಸು ಮೂಢನಾಗಿಹೆ ಮೌಲ್ಯ ಮರೆತಿಹೆ ಮುನಿಸುದೋರದೆ ಮನ್ನಿಸು || ಪ || ಮೂಡಣಾಗಸದಲ್ಲಿ ಮಿತ್ರನು ಮಗುವಿನಂದದೊಳುದಿಸಲು ಮಮತೆಯಾ ಮಂದಾರವರಳಿತು ಮಧುರ ಮಧುವನ್ನೀಯಲು || 1 || ಮುನಿ ಮನೀಷಿಗಳೆಲ್ಲ ಮಾಡಿದ ಮನನ ಮಂಥನದಿಂದಲಿ ಮೇದಿನಿಗೆ ಮುದ ಮೋಕ್ಷವಾತ್ಮಕೆ ಮಂತ್ರವುದಿಸಿತು ಮನದಲಿ || 2 || ಮನುಜನುಳಿವಿನ ಮಾರ್ಗವರಿಯಿತು ಮಂತ್ರವಾಯಿತು ಮುನ್ನುಡಿ ಮೋಹ ಮರೆಯುತ ಮದವನಳಿಸುತ ಮನುಜನಿರಿಸಿದ ಮುಂದಡಿ || 3 || ಮಾನವನ ಮಹದೇವನಾಗಿಪ ಮಂತ್ರ ಮಾರ್ದನಿಗೊಳುತಿದೆ ಮಗುವಿನಂದದಿ ಮಣಿದೆ ಮುದದಲಿ […]