ಕಾರ್ಮೋಡಗಳ ಸೀಳಿ ಕೋಲ್ಮಿಂಚು ಮೈದಾಳಿ ಗುಡುಗಿತು ನಭೋಮಂಡಲ ರಾಮನ ನೆಲದಿಂದ ಧರ್ಮದ ನೆಲೆಯಿಂದ ಬೆಳಗಲಿ ಭೂಮಿಯಂಗಳ ರಾಮನಾಮದಿ ಬೆಳಗಲಿ ಭೂಮಿಯಂಗಳ || ಪ || ಸಾಮಗಾನದ ಶೃತಿಗಿಹುದೇ ಲಯ ಸಾಮರಸ್ಯದ ಕೃತಿಗೆಲ್ಲಿಯ ಕ್ಷಯ ವಿಷಮದ ವ್ಯಾಪಾರ ವಿಶ್ವದಿ ನಶಿಸಲಿ ರಸಪೂರ್ಣವೆನಿಸಲಿ ಈ ತಾಯ್ನೆಲ || 1 || ಜಡತೆಯ ವಂಶಕೆ ವಜ್ರಾಘಾತ ಜಾಗೃತ ಜ್ವಾಲೆಗೆ ಝಂಝೂವಾತ ನಿದ್ರೆಯ ಮುದ್ರೆಯ ಒದ್ದೋಡಿಸುತಾ ಸದ್ದನು ಮರೆಯಲಿ ಸ್ವರಸಂಕುಲ || 2 || ಉಜ್ವಲ ಸಂಸ್ಕೃತಿ ಉದ್ದೀಪಿಸಿದೆ ಉತ್ಕರ್ಷಕೆ ಜಗ ಉಡ್ಡಯಿಸುತಿದೆ […]