ನಾಗಪುರದ ಮಹಲಲಾಯಿತು ನಾರೀರತ್ನದ ಜನನವು ರಾಷ್ಟ್ರ ಸೇವಿಕಾ ಸಮಿತಿ ಸ್ಥಾಪಕಿ ಈಕೆ ಸ್ತ್ರೀಯರ ಭಾಗ್ಯವು ಕಮಲ ಕೋಮಲೆ ವಾತ್ಸಲ್ಯಮಯಿಗೆ ಶಾಂತ ಸ್ನೇಹದ ಭಾವವು ರಾಷ್ಟ್ರ ಚಿಂತನೆ ಸ್ತ್ರೀಯ ರಕ್ಷಣೆಯಂಥ ಉನ್ನತ ಧ್ಯೇಯವು || ಪ || ಬಾಲ್ಯದಲ್ಲಿಯೆ ಯೋಗ್ಯ ಶಿಕ್ಷಣ ರಾಷ್ಟ್ರಭಕ್ತಿಯ ಸೇಚನ ಕೇಳ್ಕರೊಡನೆ ವಿವಾಹ ಬಂಧನ ಲಕ್ಷ್ಮಿಯಾಗಿ ವಾರ್ಧಾ ಜೀವನ ಗೃಹಿಣಿಯಾಗಿ ಗೃಹಬಂಧನ ಲಕ್ಷ್ಮೀ ಎದೆಯಲಿ ತಲ್ಲಣ ಮುದ್ದು ಮಕ್ಕಳ ಮಾತೆಯಾ ಮನ ನಿರತ ವಿಚಾರ ಮಂಥನ || 1 || ಸಾರ್ವಜನಿಕ ಜೀವನಕೆ ಲಕ್ಷ್ಮೀಬಾಯಿಯ […]