ಸುದರ್ಶನಂ ಸದಾಶಿವಂ

ಸುದರ್ಶನಂ ಸದಾಶಿವಂ ಸದಾ ಸ್ಮರಾಮಿ ಮಾಧವಮ್ ಶುಭಂಕರಂ ಪ್ರಿಯಂ ವರಂ ಸದಾ ಸ್ಮರಾಮಿ ಮಾಧವಮ್ || ಪ || ಅಖಂಡರಾಷ್ಟ್ರನಾಯಕಂ ಸಮತ್ವಗೀತಗಾಯಕಮ್ ಸುಸಂಘಮಂತ್ರದಾಯಕಂ ಸದಾ ಸ್ಮರಾಮಿ ಮಾಧವಮ್ || 1 || ತಪೋಧನಂ ಕೃಪಾಘನಂ ಆದ್ಯಶಂಕರೋಪಮಮ್ ಸುಸಿದ್ಧಯೋಗಭಾಸ್ವರಂ ಸದಾ ಸ್ಮರಾಮಿ ಮಾಧವಮ್ || 2 || ಪ್ರಕೃಷ್ಟಧೈರ್ಯಧಾರಕಂ ವಿಮುಕ್ತಹಾಸ್ಯಸುಂದರಮ್ ಭಯಾರ್ತದೀನಬಾಂಧವಂ ಸದಾ ಸ್ಮರಾಮಿ ಮಾಧವಮ್ || 3 || ವಿಧೇಯಧೇಯತತ್ಪರಂ ಸ್ವರಾಷ್ಟ್ರಭಕ್ತಿಸಾಧಕಮ್ ‘ಇದಂ ನ ಮೇ’ ವ್ರತೋಜ್ವಲಂ ಸದಾ ಸ್ಮರಾಮಿ ಮಾಧವಮ್ || 4 ||

Read More

ತವಪದಕೆ ಕೋಟಿ ನಮನ

ತವಪದಕೆ ಕೋಟಿ ನಮನ ಉದಿಸಿ ಬಾರೋ ಮಾಧವ || ಪ || ಶುದ್ಧ ಹೃದಯ ಮುಗ್ಧ ಮನದ ಓ ಪ್ರಭುದ್ಧ ಮಾನವ ಭರತಸುತರ ಜಡತೆ ನೀಗಲುದಿಸಿ ಬಂದ ಮಾಧವ ದುಗ್ಧ ಧವಳ ಹಿಮದಗಿರಿಯ ಉನ್ನತಿಯನು ಮೆರೆದವ ದಗ್ಧ ಮನಕೆ ತಂಪನೆರಚಿ ಧ್ಯೇಯ ಧಾರೆ ಎರೆದವ || 1 || ಮೇರುಗಿರಿಯ ಮಾರ್ಗವೆಂದು ಕಂಟಕಮಯ ದುರ್ಗಮ ಅವನು ತೋರ್ದ ಪಥದಿ ನಡೆಯೆ ಸಾಧ್ಯವಿಹುದು ವಿಕ್ರಮ ಧ್ಯೇಯನಿಷ್ಠೆ ವೀರವ್ರತಕೆ ಜ್ಞಾನಗಂಗೆ ಸಂಗಮ ಶಕ್ತಿಶೀಲ ಜತೆಗೆ ಸೇರೆ ಮೂಡಿಬಂತು ಸಂಭ್ರಮ || […]

Read More

ಮಾಧವನುದಿಸಿದ ಮನೆಮನೆಯಲ್ಲಿಯು

ಮಾಧವನುದಿಸಿದ ಮನೆಮನೆಯಲ್ಲಿಯು ಬಾಲಿಕೆಯಾದಳು ರಾಧೆ ನಿರ್ಮಲ ಪ್ರೇಮದ ವಾತ್ಸಲ್ಯದ ಸುಧೆ ಆದಳು ತಾಯಿ ಯಶೋಧೆ || ಪ || ಗೋವಳನೂದಿದ ಸಂಗಮ ಸ್ವರದಲಿ ಹೊಮ್ಮಿತು ಸಮರಸವೇದ ಕುರುಕುಲದಳಿವಿಗೆ ಮುನ್ನುಡಿ ಬರೆಯಿತು ಮುರಾರಿಯ ಶಂಖದ ನಾದ || 1 || ವೀರ ನರನ ರಥ ಸಾರಥಿಯಾದನು, ಕಾರ್ಯದಿ ಮೇಲ್ಕೀಳಿಲ್ಲ ನಿರ್ಮಮ ಮನದಲಿ ಕರ್ಮದ ಬೋಧನೆ ಫಲದಾಸೆಯು ಎಂದಿಗೂ ಇಲ್ಲ || 2 || ಗೀತೆಯ ಬೋಧನೆ ಪಾರ್ಥ ನಿಮಿತ್ತದಿ ಸಾರ್ಥಕ ಬದುಕಿನ ಪಾಠ ಪಾಂಡವರೈವರೇ ಕೈಯ್ಯಾಯುಧಗಳು ಇಳುಹಿದೆ ಭೂಮಿಯ […]

Read More

ಮಾಧವ ನಿನ್ನಯ ಆದರ್ಶಗಳೆ

ಮಾಧವ ನಿನ್ನಯ ಆದರ್ಶಗಳೆ ಬಾಳಿಗೆ ಸೋಪಾನ ಭೇದವ ಮರೆಸುವ ಆದೇಶಗಳೆ ಸ್ಫೂರ್ತಿಯ ಸಂಚಲನ ಸಾಧನೆ ತೋರಿ ಮಾಡಿದೆಯಂದು ಸಂತರ ಸಮ್ಮಿಲನ ಸಾಧಕ ಪುರುಷನೆ ಯುಗ ದ್ರಷ್ಟಾರನೆ ಗೈವೆವು ಶತನಮನ || ಪ || ಕೇಶವ ನೆಟ್ಟಿಹ ವೃಕ್ಷದ ಪಾಲನೆ ಪೋಷಣೆ ನೀ ಗೈದೆ ಕ್ಲೇಶವನೆಣಿಸದೆ ಸಂಘದ ಕಾರ್ಯಕ್ಕೆ ರಭಸವ ನೀ ತಂದೆ ಶೋಷಿತ ಜನತೆಗೆ ಪ್ರೀತಿಯ ಸುಧೆಯನು ಅನುದಿನ ನೀನೆರೆದೆ ಆಸರೆ ನೀಡುತ ವನವಾಸಿಗಳ ಬಾಳಿಗೆ ಬೆಳಕಾದೆ || 1 || ಅಮ್ಮನ ಮರೆಯುವ ನಮ್ಮಯ ತರುಣರ […]

Read More

ದೇಹಿ ಕೇಶವ ದೇಹಿ ಮಾಧವ

ದೇಹಿ ಕೇಶವ ದೇಹಿ ಮಾಧವ ನಿರ್ಮಲ ಚರಿತ ಆಶಿಷಮ್ ತವಪದ ವಿರಚಿತ ಸತ್ಪಥ ಗಮನಮ್ ಮಮ ಜೀವನ ಅಭಿಲಾಷಮ್ || ಪ || ಮಧುರಾವಾಣೀ ಸದಯಂ ಹೃದಯಂ ವದಮೇ ಕಥಮುಪಲಬ್ಧಮ್ ಸುದೃಢಾ ನಿಷ್ಠಾ ಮಹತೀ ವೃತ್ತಿಃ ವದಮೇ ಕಥಮುಪಲಬ್ಧಮ್ ಹಿಮಗಿರಿ ಫಾಲೇ ಜಲಧಿಃ ಪಾದೇ ವದಮೇ ಕಥಮಭಿದೃಷ್ಟಮ್ ವನಮಾಲಾಂಗಂ ಮುನಿಭಿರ್ಗೀತಮ್ ವದಮೇ ಕಥಮಭಿದೃಷ್ಟಮ್ || 1 || ಹಿಂದು ಸಮಾಜಂ ಶಿಥಿಲಂ ದೃಷ್ಟ್ವಾ ವ್ಯಥಿತಂ ತಾವತ್ ಹೃದಯಂ ಮಾಮಕ ಚಿತ್ತೇ ತಾದೃಶ ಭಾವಮ್ ಭಾತಿ ಕದಾ ಗಾಢಂ […]

Read More

ಹಿಂದು ರಾಷ್ಟ್ರ ರಕ್ಷಿಸಲು ಖಡ್ಗ

ಹಿಂದು ರಾಷ್ಟ್ರ ರಕ್ಷಿಸಲು ಖಡ್ಗ ಹಿಡಿಯೋ ಧೀರ ಶತ್ರು ಇರಲಿ ಮಿತ್ರ ಬರಲಿ ಸಾಗು ಮುಂದೆ ವೀರ || ಪ || ಅನಾದಿ ಕಾಲದಿಂದ ಬಂದ ಹಿಂದು ಸಂಸ್ಕೃತಿ ಬುನಾದಿಯಿಂದ ಎತ್ತಿಹಿಡಿದು ಧರ್ಮದಾ ವೃತಿ ಅಧರ್ಮ ಮಾರ್ಗದಲ್ಲಿ ನಡೆದ ವೀರರವನತಿ ಸ್ವಶಕ್ತಿ ಇಳಿದ ರಾಷ್ಟ್ರವೆಲ್ಲ ಪರರ ಆಹುತಿ || 1 || ರಾಷ್ಟ್ರವನ್ನು ಕಬಳಿಸುವಾ ದುಷ್ಟ ದುರಾಕ್ರಮಕರು ಮೂಲೆ ಮೂಲೆಗಳಿಗು ಹರಡಿ ವಂಚಿಸುತಲಿ ಇರುವರು ದರ್ಪದಿಂದ ವೀರತ್ವದ ನಮ್ಮ ರಾಷ್ಟ್ರ ಸುಡುವರು ಇಂಥ ಹೀನ ಜನರ ಹೃದಯ […]

Read More

ಸ್ವಾಗತವು ಸ್ವಾಗತವು ಪೂಜ್ಯ ಶ್ರೀ ಮಾಧವಗೆ

ಸ್ವಾಗತವು ಸ್ವಾಗತವು ಪೂಜ್ಯ ಶ್ರೀ ಮಾಧವಗೆ ಸ್ವಾಗತವು || ಪ || ಆಗಸದ ವೈಶಾಲ್ಯ ಸಾಗರದ ಗಾಂಭೀರ್ಯ ಹಿಮಗಿರಿಯ ವರಸ್ಥೈರ್ಯ ಮೂರ್ತಿಮಂತನೆ ನಿನಗೆ || 1 || ಹೃದಯದ ಔದಾರ್ಯ ಮಮತೆಯ ಮಾಧುರ್ಯ ಸಂಘಟನ ಚಾತುರ್ಯ ಮಾರ್ಗದರ್ಶಕ ನಿನಗೆ || 2 || ಕೇಶವನ ಪ್ರತಿಬಿಂಬ ರಾಷ್ಟ್ರದೀಪದ ಸ್ತಂಭ ದೇಶಭಕ್ತಿಯ ಕುಂಭ ಶಕ್ತಿದಾತನೆ ನಿನಗೆ || 3 || ಸಂಸ್ಕೃತಿಯ ಸುವಿಚಾರ ಋಷಿವರ್ಯರಾಚಾರ ಭವಿತವ್ಯದುಚ್ಚಾರ ಯೋಗಿವರ್ಯನೆ ನಿನಗೆ || 4 || ಜಯಜಯವು ಭಾರತಿಗೆ ಜಯಜಯವು ಕೇಶವಗೆ […]

Read More

ಓರ್ವ ಕೇಶವ ಓರ್ವ ಮಾಧವ

ಓರ್ವ ಕೇಶವ ಓರ್ವ ಮಾಧವ ಅಮರ ಪಂಕ್ತಿಗೆ ಯಾದವ “ಜಯಿಸು ಅಜೇಯವ ಸೆಣಸು ಸವಾಲಿಗೆ” ಸೂತ್ರ ಮೊಳಗಿದ ಬಾಂಧವ || || ಪ || ಬಾಲ್ಯದಲಿ ಸಂಗೀತ ಸುಧೆಯಲಿ ಬಾಲಭಾಸ್ಕರ ಎನಿಸಿದೆ ಕನ್ನಡ ನೆಲದಲಿ ಸಂಘಧ್ಯೇಯದ ತಾನ ಪಲ್ಲವಿ ಉಲಿಸಿದೆ || || 1 || ಬಾನಿನೆತ್ತರ ಭಾವ ಬಿತ್ತರ ಹೊಸದು ಆಯಾಮಗಳ ಮಜಲು ಹಿಂದು ಭಾವನೆ ಬೆಳೆದು ಬೆಳಗಲು ಹಬ್ಬಿಸಿದೆಯಾ ಅಪೂರ್ವ ಬಿಳಲು || 2 || ದಿಟ್ಟ ಮನಸಿನ ಕಠಿಣ ತಪಸಿನ ಮನು ಹೃದಯಗಳ […]

Read More