ಏಳು, ಮೇಲೇಳು ಸಾಧುವೆ (ಚಾಗಿಯ ಹಾಡು)

ಏಳು, ಮೇಲೇಳೇಳು ಸಾಧುವೆ, ಹಾಡು ಚಾಗಿಯ ಹಾಡನು; ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು ! ದೂರದಡವಿಯೊಳೆಲ್ಲಿ ಲೌಕಿಕ ವಿಷಯವಾಸನೆ ಮುಟ್ಟದೊ, ಎಲ್ಲಿ ಗಿರಿಗುಹೆ ಕಂದರದ ಬಳಿ ಜಗದ ಗಲಿಬಿಲಿ ತಟ್ಟದೊ, ಎಲ್ಲಿ ಕಾಮವು ಸುಳಿಯದೋ, – ಮೇಣ್ ಎಲ್ಲಿ ಜೀವವು ತಿಳಿಯದೋ ಕೀರ್ತಿ ಕಾಂಚನವೆಂಬುವಾಸೆಗಳಿಂದ ಜನಿಸುವ ಭ್ರಾಂತಿಯ, ಎಲ್ಲಿ ಆತ್ಮವು ಪಡೆದು ನಲಿವುದೊ ನಿಚ್ಚವಾಗಿಹ ಶಾಂತಿಯ, ನನ್ನಿಯರಿವಾನಂದವಾಹಿನಿಯೆಲ್ಲಿ ಸಂತತ ಹರಿವುದೋ, ಎಲ್ಲಿ ಎಡೆಬಿಡದಿರದ ತೃಪ್ತಿಯ ಝರಿ ನಿರಂತರ ಸುರಿವುದೋ, ಅಲ್ಲಿ ಮೂಡಿದ ಹಾಡನುಲಿಯೈ, ವೀರ ಸಂನ್ಯಾಸಿ […]

Read More

ಶ್ರೀ ವಿವೇಕಾನಂದ ಗುರುವರ (ಕುವೆಂಪು)

ಶ್ರೀ ವಿವೇಕಾನಂದ ಗುರುವರ, ನವಯುಗಾಚಾರ್ಯ, ರಾಮಕೃಷ್ಣರ ಭೀಮಶಿಷ್ಯನೆ, ವೀರ ವೇದಾಂತಿ, ಭಾರತಾಂಬೆಯ ಧೀರಪುತ್ರನೆ, ಸಾಧು ಭೈರವನೆ, ಸ್ಥೈರ್ಯದಚಲವೆ, ಧೈರ್ಯದಂಬುಧಿ, ಜಯತು! ಜಯ ಜಯತು! || ಪ || ಮೊರೆದು ಗರ್ಜಿಪ ಕಡಲ ವಾಣಿಯು ನಿನ್ನ ವರವಾಣಿ, ಕಾರಮಿಂಚನು ನಗುವ ತೇಜವು ನಿನ್ನ ಮೈ ಕಾಂತಿ, ಆಳವಂಬುಧಿಯಾಳ ಮೇರೆಯೆ ನಭದ ವಿಸ್ತಾರ ಮಂದರಾದ್ರಿಯ ಮೀರಿದಚಲನು ನೀನು, ಯೋಗೀಂದ್ರ ! || 1 || ನಿನ್ನ ಹೆಸರದೆ ಶಕ್ತಿಯೀಯುವ ದಿವ್ಯತರ ಮಂತ್ರ ನಿನ್ನ ಮಾರ್ಗವೆ ಮುಕ್ತಿದಾಯಕವಾದ ವರಮಾರ್ಗ ನಮ್ಮ ಹೃದಯಕೆ […]

Read More

ಓ ನನ್ನ ಚೇತನ (ಶ್ರೀ ಕುವೆಂಪು)

ಓ ನನ್ನ ಚೇತನ ಆಗು ನೀ ಅನಿಕೇತನ ರೂಪ ರೂಪಗಳನು ದಾಟಿ ನಾಮ ಕೋಟಿಗಳನು ಮೀಟಿ ಎದೆಯ ಬಿರಿಯೆ ಭಾವದೀಟಿ ಓ ನನ್ನ ಚೇತನ ನೂರು ಮತದ ಹೊಟ್ಟ ತೂರಿ ಎಲ್ಲ ತತ್ತ್ವದೆಲ್ಲೆ ಮೀರಿ ನಿರ್ದಿಗಂತವಾಗಿ ಏರಿ ಓ ನನ್ನ ಚೇತನ ಎಲ್ಲಿಯೂ ನಿಲ್ಲದಿರು ಮನೆಯನೆಂದು ಕಟ್ಟದಿರು ಕೊನೆಯನೆಂದು ಮುಟ್ಟದಿರು ಓ ಅನಂತವಾಗಿರು ಓ ನನ್ನ ಚೇತನ ಅನಂತ ತಾನ್ ಅನಂತವಾಗಿ ಆಗುತಿಹನೆ ನಿತ್ಯಯೋಗಿ ಅನಂತ ನೀ ಅನಂತವಾಗು ಆಗು ಆಗು ಆಗು ಆಗು ಓ ನನ್ನ […]

Read More