ಜಡತೆಯನು ಕೊಡಹುತಲಿ

ಜಡತೆಯನು ಕೊಡಹುತಲಿ ಮೇಲೆದ್ದೇಳು ಹಿಂದುಕೇಸರಿ ದೃಢತೆಯನು ತಳೆ ಧ್ಯೇಯಮಾರ್ಗದಿ ಚಿರಪುರಾತನ ರಣಕಲಿ || ಪ || ಮರೆಯದಿರು ನೀನಿಂದ್ರಪ್ರಸ್ಥದ ಪಾಂಡವರ ಕುಡಿಯೆಂಬುದ ಅರಿಯುತಿರು ಚಾಣಕ್ಯ ಮೌರ್ಯರ ವಾರಸಿಗ ನೀನೆಂಬುದ ಬರವದೇತಕೆ ಬಂತು ನಿನ್ನಲಿ ಛತ್ರಪತಿ ಶಿವ ಶೌರ್ಯದ ಕರದೊಳೇತಕೆ ಮಾಯವಾಯಿತು ರಣಪ್ರತಾಪನ ಆಯುಧ || 1 || ಭಾರತದ ಅವನತಿಗೆ ಕಾರಣ ಮಾಯವಾಗಿಹ ಕ್ಷಾತ್ರತೆ ಮೇರುಸದೃಶ ಪರಾಕ್ರಮವು ಪಾತಾಳಕಿಳಿದಿಹ ದೈನ್ಯತೆ ಏರು ಮೇಲೇರೇರು ತೋರುತ ನಿನ್ನ ಕ್ಷಾತ್ರಪರಂಪರೆ ಸಾರು ಭಾರತ ಬ್ರಹ್ಮಕ್ಷಾತ್ರದ ಸಾಮರಸ್ಯ ಮಹಾಧರೆ || 2 […]

Read More