ಸಂಘ ಸಂಜೀವಿನಿಯ ಜನಕಿತ್ತ ಕೇಶವನೇ ನಿನಗಿದೋ ನಮ್ಮಯ ಶತಕೋಟಿ ನಮನ || ಪ || ಪರದಾಸ್ಯ ಪರತತ್ವ ಯುವ ಮನವ ತುಂಬಿರಲು ರಾಷ್ಟ್ರಭಕ್ತಿಯ ಭಾವ ಅರಳಿಸಿದೆ ನೀನು ಜಾತಿ ಮತದ ನೆವದಿ ದೇಶ ಚೂರಾಗಿರಲು ಹಿಂದು ಎನ್ನುವ ಭಾವ ಮರಳಿಸಿದೆ ನೀನು || 1 || ಬಾಳ ಬೇವನು ಉಂಡು ನಮಗೆ ಬೆಲ್ಲವನಿತ್ತು ಭಾರತದ ವೈಭವದ ಕನಸು ಕಂಡೆ ವಾದ ಭೇದವ ಬಿಟ್ಟು ಪ್ರೇಮಸೌಧವ ಕಟ್ಟಿ ಬರಿಗೈಲಿ ಬಹುಜನರ ಬರಸೆಳೆದುಕೊಂಡೆ || 2 || ಅಂದು ನೀನಿಟ್ಟ […]
ಸಂಘ ಗಂಗೆಯ ಭುವಿಗೆ ಇಳಿಸಿಹ ನವ ಭಗೀರಥನೇ ಹಿಂದು ಮನುವನು ಒಂದುಗೊಳಿಸಿಹ ವೀರ ಕೇಶವನೇ || ಪ || ವೈದ್ಯ ಪದವಿಯ ಪಡೆದು ನೋಡಿದೆ ನಾಡ ನಾಡಿಯನು ಸಂಘದೌಷಧ ನೀಡಿಕಳೆಯಲು ಭೇದ ಭಾವವನು ವ್ಯಕ್ತಿವ್ಯಕ್ತಿಯ ಬೆಸೆದು ನಡೆಸಲು ಸಂಘ ದಾರಿಯಲಿ ಇರುಳು ಕಳೆವುದು ಬೆಳಕು ಹರಿವುದು ನಾಡ ಬಾನಿನಲಿ || 1 || ದೀನದುರ್ಬಲ ಮನಸಿನಾಳದಿ ಧೈರ್ಯ ತುಂಬಿಸಲು ಒಡೆದು ಹೋಗಿಹ ಹಿಂದು ಜನತೆಯ ಒಂದುಗೂಡಿಸಲು ನಿತ್ಯಶಾಖೆಯ ಐಕ್ಯಸೂತ್ರವ ನೀಡಿ ತೋರಿಸಿಹೆ ಹಿಂದು ದೇಶದ ಪರಮವೈಭವ ಮತ್ತೆ […]