ಕೇಶವನ ಜೀವನವು ಎಮಗೆಲ್ಲ ದೀವಿಗೆಯು

ಕೇಶವನ ಜೀವನವು ಎಮಗೆಲ್ಲ ದೀವಿಗೆಯು ರಾಷ್ಟ್ರಕಾರ್ಯದಿ ಅವ ಮೇರು ಮಾದರಿಯು ಪರಮವೈಭವ ರಾಷ್ಟ್ರಕೇ ಗುರಿಯಿಟ್ಟನವನು ಪಥದರ್ಶಕನು ಆದ ಗುರಿಯ ಸಾಧನೆಗವನು || ಪ || ಹುರಿದು ಮುಕ್ಕುವ ಬಡತನವ ಬದಿಗೊತ್ತಿ ಯುವಕರಿಗೆ ತೋರಿದ ಗುರಿಯೆಡೆಗೆ ಕೈಯೆತ್ತಿ ಪಥಿಕ ಜೊತೆಗೊಯ್ದ ತಾನೆ ನಾವಿಕನಾಗಿ ಬೆಳಗುವ ಭಾರತದ ಸೂರ್ಯನೇ ತಾನಾಗಿ || 1 || ವ್ಯಕ್ತಿಗಳ ಪ್ರೇರಿಸಿ ತಾ ಕರೆತಂದನಂದು ರಾಷ್ಟ್ರಸೇವೆ ದೀಕ್ಷೆ ನೀಡಿದನು ನಿಂದು ವ್ಯಕ್ತಿ ವ್ಯಕ್ತಿಯು ಕೂಡೆ ರಾಷ್ಟ್ರಕಾರ್ಯವು ಎಂದು ಯೋಜಿಸಿ ನಿಲಿಸಿದನು ಸಂಘವೃಕ್ಷವ ಅಂದು || […]

Read More

ಕೇಶವನ ಕಲ್ಪನೆಯನು ಮಾಧವನ ಮಾರ್ಗವನು

ಕೇಶವನ ಕಲ್ಪನೆಯನು ಮಾಧವನ ಮಾರ್ಗವನು ಅನುಸರಿಸುತ ಮುನ್ನಡೆದಿಹ ಕಾರ್ಯಾರ್ಥಿಗಳು ನಾವು ಧ್ಯೇಯಕೇತನದೆದುರು ಶರಣಾರ್ಥಿಗಳು ನಾವು || ಪ || ಮತಜಾತಿಯ ಭೇದವಿರದೆ ನೆಲಭಾಷೆಯ ಜಗಳವಿರದೆ ಸಮರಸತೆಯ ಏಕತೆಯಲಿ ಸಚ್ಚರಿತವ ಸಂಕಲಿಸುತ ಸಂಘಸುಧಾಸಿಂಧುವಲಿಹ ಕಾರ್ಯಾರ್ಥಿಗಳು ನಾವು || 1 || ಹೊನ್ನುಹಣದ ಮೋಹವಿರದೆ ಅಧಿಕಾರದ ದಾಹವಿರದೆ ಕರ್ತವ್ಯದ ಭಾವ ಬೆಳೆಸಿ ಮಾತೃಭೂಮಿ ರಕ್ಷೆಗಾಗಿ ಅನವರತವು ನಿರತರಿರುವ ಕಾರ್ಯಾರ್ಥಿಗಳು ನಾವು || 2 || ವೈಭವೋತ್ತುಂಗದಲಿ ಮತ್ತೆ ಮೆರೆವ ಭಾರತಿಯನು ಇದುವೆ ದೇಹದಕ್ಷಿಯಿಂದ ಕಾಣಲೆಂದು ಹಂಬಲಿಸುತ ಸಂಕಲ್ಪವ ಸ್ವೀಕರಿಸಿಹ ಕಾರ್ಯಾರ್ಥಿಗಳು […]

Read More

ಹನಿಯು ವಾಹಿನಿಯಾಯ್ತು

ಹನಿಯು ವಾಹಿನಿಯಾಯ್ತು ವಾಹಿನಿಯು ಜಲಧಿ ಕೇಶವನ ಛಲಧಾರಿ ಯುವಜನರ ಬಲದಿ ಸತತ ಸಾಧನೆಗೈದ ಭಾರತದ ನೆಲದಿ || ಪ || ವಿಘ್ನಕೋಟಿಯ ಗೆದ್ದು ದಾಟಿಹುದು ಸಂಘ ಅಗ್ನಿಯೊಳು ಮಿಂದು ಮೇಲೆತ್ತಿಹುದು ಶೃಂಗ ಗೈದಿಹುದು ವೈರಿಗಳ ಬಹುವ್ಯೂಹ ಭಂಗ ಪಸರಿಸಿದೆ ಸಾಹಸದ ಸಾಸಿರ ತರಂಗ || 1 || ರೂಢಿಯೊಳಗೂಡಿರುವ ಮೌಢ್ಯವನು ತೊರೆದು ಕಾಡಿರುವ ಕೇಡುಗಳ ಬೆನ್ನೆಲುಬು ಮುರಿದು ಮೂಡಿಹನು ನೋಡಲ್ಲಿ ಜಾಗೃತಿಯ ಸೂರ್ಯ ನೀಡಿಹನು ನಾಡಿದಕೆ ಕುಂದದಿಹ ಧೈರ್ಯ || 2 || ಆಂತರಿಕ ಭೇದಗಳ ಅಂತರವನಳಿಸಿ […]

Read More

ಕೇಶವನ ಕರಗಳಿಂದ ರೂಪು ತಳೆದ ಯಾದವ

ಕೇಶವನ ಕರಗಳಿಂದ ರೂಪು ತಳೆದ ಯಾದವ ತೆರೆಯ ಮರೆಯ ಸಾಧಕರಿಗೆ ಅಮರಸ್ಫೂರ್ತಿಯಾದವ ಧ್ಯೇಯಮೂರ್ತಿಯಾದವ … ಹರಸು ನಮ್ಮ ಬಾಂಧವ || ಪ || ಬಾಲ್ಯದಾ ದಿನಗಳಲ್ಲಿ ಮಧುರ ದನಿಯ ಗಾಯಕ ಸಂಘಟನೆಯ ದೀಕ್ಷೆ ಧರಿಸಿ ಆದೆಯೊ ಘನಸಾಧಕ ಧ್ಯೇಯಕಾಗಿ ದೇಹ ಸವೆಸಿದಂಥ ನಿನ್ನ ಜೀವನ ಸಾರ್ಥಕತೆಯ ವೀರಗಾಥೆ ನಿನ್ನ ಜನುಮ ಪಾವನ || 1 || ಕಲ್ಲುಮುಳ್ಳು ವಿಘ್ನಕೋಟಿ ಎಲ್ಲ ಮೆಟ್ಟಿ ಕ್ರಮಿಸಿದೆ ಹಸಿವು ನಿದ್ದೆ ಪರಿವೆ ತೊರೆದು ನಾಡಿಗಾಗಿ ಶ್ರಮಿಸಿದೆ ಶೂನ್ಯದಲ್ಲಿ ಸೃಷ್ಟಿಗೈದ ನಿನ್ನ ಕಾರ್ಯಶಕ್ತಿಗೆ […]

Read More