ರಕ್ಷೆಯ ಕಟ್ಟುವೆವು ನಾವು ರಕ್ಷೆಯ ಕಟ್ಟುವೆವು ನಿಶ್ಚಯ ಮಾಡಿಹೆವು ಬಲಾಢ್ಯ ರಾಷ್ಟ್ರವ ಕಟ್ಟುವೆವು || ಪ || ಹಿಂದೂ ಸಾಗರದಲೆಗಳಸಂಖ್ಯ ಬ್ರಹ್ಮದೇವನಿಗು ಎಣಿಸಲಸಾಧ್ಯ ಕಟ್ಟಿಹ ರಕ್ಷೆಗಳಗಣಿತವಣ್ಣ ಹೊಳೆ ಹೊಳೆಯುತಲಿದೆ ಕೇಸರಿಬಣ್ಣ || 1 || ಒಂದೇ ತಾಯಿಯ ಮಕ್ಕಳು ನಾವು ಒಂದೇ ಮಣ್ಣಿನ ಕಣಗಳು ನಾವು ಮೇಲುಕೀಳುಗಳ ಭೇದವನಳಿಸಿ ಸ್ನೇಹದ ಪ್ರೇಮದ ಭಾವನೆ ಬೆಳೆಸಿ || 2 || ಎಮ್ಮೊಳಹೊರಗಿನ ಶತ್ರುಗಳನ್ನು ಸುಟ್ಟುರಿಸುತ ದುರ್ಮಾರ್ಗಿಗಳನ್ನು ದೃಢಸಂಕಲ್ಪದ ಸತ್ಪಥದಲ್ಲಿ ಮುನ್ನುಗ್ಗುತ ಜನಮನವನು ಗೆಲ್ಲಿ || 3 || ಮೈಮರೆವಿನ […]