ಕಟ್ಟಬನ್ನಿ ತರುಣರೇ ನವಭಾರತ ದೇಶವ ಸ್ವತ್ವ ಸ್ವಾಭಿಮಾನಭರಿತ ಶಕ್ತಿವಂತ ರಾಷ್ಟ್ರವ… ನವಭಾರತ ದೇಶವ || ಪ || ಕಿತ್ತುಬಿಸುಟು ಸುತ್ತಲಿರುವ ವಿಷಮ ವಿಷದ ಕಳೆಯನು ಬಿತ್ತಿ ಬೆಳೆದು ತನ್ನತನದ ಹೊನ್ನಿನಂಥ ಬೆಳಯನು ಚಿತ್ತದಲ್ಲಿ ಮನೆಯ ಮಾಡಿದಂಥ ಭ್ರಮೆಯ ತೊಲಗಿಸಿ ಕತ್ತಲನ್ನು ದೂರಗೊಳಿಸಿ ಧ್ಯೇಯದೀಪ ಬೆಳಗಿಸಿ || 1 || ಜಗಕೆ ಅನ್ನ ನೀಡಬಲ್ಲ ಸಾಮರ್ಥ್ಯವು ನಮಗಿರೆ ಕರದೊಳೇಕೆ ಭಿಕ್ಷಾಪಾತ್ರೆ ಅನ್ನಪೂರ್ಣೆ ಈ ಧರೆ ಗಂಗೆ ತುಂಗೆ ಹರಿವ ನೆಲದಿ ಬೇಕೆ ಹಂಗಿನರಮನೆ | ಬೆವರು ಸುರಿಸಿ ಸಾಧಿಸೋಣ […]