ಕರುಣಾಳು ದೇವನವ ನರಜನುಮ ಕೊಟ್ಟಿರಲು

ಕರುಣಾಳು ದೇವನವ ನರಜನುಮ ಕೊಟ್ಟಿರಲು ಪರಹಿತವ ಬಯಸುತ್ತಾ ಮನುಜರಾಗೋಣ || ಪ || ಪರಮಾತ್ಮ ಸೃಷ್ಟಿಸಿಹ ಎಲ್ಲಾ ಜೀವಿಗಳನ್ನು ಎಲ್ಲೆಲ್ಲೂ ಎಲ್ಲರೊಳು ಆ ದೇವನಿರಲು ದೂರ ಸರಿಯುವ ಕ್ರೌರ್ಯ ಸರಿಯೇನು ಹೇಳಿ ? ತರತಮದ ಭಾವವಿದು ಬಲು ಕೆಟ್ಟ ಚಾಳಿ || 1 || ಬೆರಳತುದಿ ಹೊರಳಿಸಿಯೇ ವಿಶ್ವವನೇ ಕಂಡರೂ ಕೀಳುಭಾವನೆ ಹುಳುಕು ಬಿಡಲಾರವೇಕೆ ? ಅಂತರ್ಜಾಲವನರಿತು ಅಂತರಾಳವೆ ಬರಿದು ನೊಂದ ಮನಗಳ ಅಳಲ ತಿಳಿಯವೇಕೆ ? || 2 || ಕೆಟ್ಟ ಕಟ್ಟಳೆಯೆಲ್ಲಾ ಸುಟ್ಟು ಹೋಗಲಿ […]

Read More