ವಿಸ್ಮೃತಿಯ ಕಾರಿರುಳು ಭಾರತವ ಮುಸುಕಿರಲು ಅಲ್ಲಿ ಮೂಡಿತು ಒಂದು ಬೆಳ್ಳಿ ಕಿರಣ || ಪ || ನಂಬಿಕೆಯ ಚಿತ್ತಾರ ಗಗನಂಗಣದಿ ಬಿಡಿಸಿ ತುಂಬಿಸಿತು ಹೊಂಬೆಳಕು ಅರುಣ ವರ್ಣ || 1 || ಸಂಘ ಸೂರ್ಯನು ಉದಿಸೆ ಸಂಘಟಿಸೆ ಸಮರಸತೆ ಹಿಂದು ಮನದಂಗಳದಿ ರಂಗವಲ್ಲಿ || 2 || ಅಸಮತೆಯ ಭಾರದಲಿ ಬಸವಳಿದ ಭಾರತಿಗೆ ಏಕರಸಧಾರೆಯಲ್ಲಿ ಕಾಯಕಲ್ಪ || 3 ||
ಕಳೆದಿಹುದು ಕಾರಿರುಳು ಕರಗಿಹುದು ಕಾರ್ಮುಗಿಲು ಇಂದು ಹಿಂದು ಭಾಸ್ಕರನ ಉದಯಕಾಲ ನಾಡ ಪರಿವರ್ತನೆಯ ಪರ್ವಕಾಲ || ಪ || ಉಷೆಯುದಿಸಿ ಬಂದಿಹಳು, ನಿಶೆಯುಸಿರ ನೀಗಿಹಳು ಅರುಣ ಕಿರಣದ ಪ್ರಭೆಗೆ ಸ್ವಾಗತವ ಕೋರಿಹಳು ಮೈಮರೆತು ಮಲಗಿದ್ದ ನಾಡು ಮೇಲೆದ್ದಿಹುದು ದಾಸ್ಯದವಶೇಷವದು ಧರೆಗುರುಳಿ ಬಿದ್ದಿಹುದು || 1 || ಪುಟಪುಟದ ಇತಿಹಾಸ ಸಟೆಯ ಧಿಕ್ಕರಿಸಿಹುದು ದಿಟದ ಧೀಮಂತಿಕೆಯ ದಿಟ್ಟತನ ಧರಿಸಿಹುದು ದ್ರೋಹಿಗಳು ಒಡ್ಡಿರುವ ಭೀಕರ ಸವಾಲುಗಳ ಕಟಿಬದ್ಧ ಯುವಜನತೆ ಛಲದಿ ಸ್ವೀಕರಿಸಿಹುದು || 2 || ಎಚ್ಚೆತ್ತ ಕೇಸರಿಗೆ ವನದೊಳೆದುರಾರಿಹರು? […]