ಶ್ರೀಗಂಧಾ ಈ ನೆಲದ ಮಣ್ಣಿದು ತಪೋವನವು ಪ್ರತಿ ಗ್ರಾಮವು ಪ್ರತಿ ಮಗಳೂ ಆ ದೇವಿಯ ರೂಪ ಪ್ರತಿ ಮಗನೂ ಶ್ರೀರಾಮನು || ಪ || ಪ್ರತಿ ಶರೀರ ಮಂದಿರದೊಲು ಪಾವನ ಪ್ರತಿ ಮಾನವ ಉಪಕಾರಿಯು ಸಿಂಹವೇ ಇಲ್ಲಿ ಮಕ್ಕಳ ಆಟಿಕೆ ಹಸುವೇ ಇಲ್ಲಿದೋ ತಾಯಿಯು ಬೆಳಗಿನ ಸಮಯದಿ ಶಂಖದ ಧ್ವನಿಯು ಸಂಜೆಗೆ ತಪ್ಪದೆ ಜೋಗುಳವು ||ಪ್ರತಿ ಮಗಳೂ|| ಕರ್ಮದ ಮೇಲೆ ಭಾಗ್ಯವು ಬದಲು ಶ್ರಮನಿಷ್ಠೆಗಳೇ ಕಲ್ಯಾಣವು ತ್ಯಾಗ ತಪದ ಪಾರಾಯಣ ಗೈವ ಕವಿ ಮನಸಿನ ಸಿಹಿವಾಣಿಯು ಜ್ಞಾನವು […]
ಆ ಶಿವನ ದೇಶಿಕನ ಧ್ಯೇಯಕೆ ನಮನಾ…. ರಾಷ್ಟ್ರಪಾಲ ಧೀರತೇಜ ವೀರಧೀರ ನೀನೆಮ ಶಿವ ರಾಷ್ಟ್ರಪಾಲ ಧೀರತೇಜ ವೀರಧೀರನೇ…… ದುಷ್ಟರಿಗಿವ ಯಮಸದೃಶ ಶಿಷ್ಟರಿಗಿವನಿನಸದೃಶ ಕಷ್ಟದಲಿಹ ನಷ್ಟದಲಿಹ ಜನರಿಗಿವ ಶಿವಸದೃಶ ದುಷ್ಟರಿಗಿವ ಯಮಸದೃಶ ಶಿಷ್ಟರಿಗಿವನಿನಸದೃಶ ಕಷ್ಟದಲು ನಷ್ಟದಲು ತಂದನು ಹರುಷ ತ್ಯಾ….ಗಿಯಿವಾ, ಯೋಗದಿ ರತನೂ… ಭೋ…ಗಪರಾ…ಪುರಜನರ ಸರಿಪಡಿಸುವ ತ್ಯಾ….ಗಿಯಿವಾ, ಯೋಗದಿ ರತನೂ…. ಭೋ…ಗಪರಾ…ಜಡಮತಿಯ ಹರಾ… ಭಾರತಭಕುತ ವಿಜಯಕೆ ತುಡಿತ ಕಾರ್ಯದಿ ನಿರತ ಶಿವನನವರತಾ ಭಾರತ ಭಕುತ ವಿಜಯಕೆ ತುಡಿತ ಅನವರತ ನಮತುಡಿತ ಜಡತೆಗೆ ಥಳಿತಾ……
ಕರುಳಿನ ಕರೆ ಕೇಳಿಸದೆ? ಮರಳಿ ಬನ್ನಿ ಮನೆಗೆ ತೆರಳದಿರಿ ಮೋಹಕದ ನಗರಿಯೆಡೆಗೆ ನಿಶಿದಿನದ ನರಳಿಕೆಯ, ಕನವರಿಕೆ ಜೋಂಪುಗಳ ತೊರೆದು ಮಾಯಾ ನಗರಿ, ಬನ್ನಿ ಮನೆಗೆ || ಪ || ಬರಿದೆ ಬವಣೆಯ ಬದುಕು ಬನ್ನ ಬಳಲಿಕೆಯಿಂದ ಹೊರಳ ಸಹಜತೆಯೆಡೆಗೆ- ನಮ್ಮ ಮನೆಗೆ ಪ್ರೀತಿ, ಪ್ರೇಮದ ಹೊನಲು, ಅನುಭವದ ಹೊಂಬಿಸಿಲು ನೆಮ್ಮದಿಯ ಹೊಸ ಚಿಗುರು ಒಡೆವ ಕಡೆಗೆ || 1 || ಭ್ರಮೆಯ ಮಾಯಾಂಗನೆಯ ಬಡಿವಾರದುರುಳಿಂದ ಮುಕ್ತರಾಗುತ ತಾಯ ಮಡಿಲಿನೆಡೆಗೆ. ಭೂರಮೆಯು ಹಸಿರುಡುಗೆ ಸೆರಗಿನೊಳಗಡೆ ಸೆಳೆದು ಸ್ತನ್ಯ ಸುಧೆಯನು […]
ಮನೆಯ ಹೊರಗಡೆ ಅಲ್ಲ,ಮನದ ಹೊರಗೂ ಅಲ್ಲ ಒಳಗಡೆಗೆ ಆಳದೆಡೆ ನಾನಿಳಿಯಬೇಕು ಒಳಗಿಳಿದು ಕೆಳಗಿಳಿದು ಒಳಗಿನರಗಿಳಿ ನುಡಿವ ಒಲುಮೆಯ ಸವಿನುಡಿಯ ಕಿವಿಗಿಳಿಸಬೇಕು || ಪ || ಹಿಂದು ಮುಂದರಿಯದಲೆ ಅಲೆಯುತಿಹ ಇಂದ್ರಿಯವ ತುಡುಗುತನವನು ಬಿಡಿಸಿ ಹಿಂದೆಳೆಯಬೇಕು ಹಿಡಿವಡೆಯಲೆಡೆಗೊಡದೆ ಚಂದವರಸುವ ಮನವ ಚಂದದಲಿ ಅನುನಯಿಸಿ ಕುಳ್ಳಿರಿಸಬೇಕು || 1 || ಕಣ್ಣಾಲಿಗಳ ಮುಚ್ಚಿ ಒಳಗಣ್ಣುಗಳ ತೆರೆದು ಆಂತರಂಗದ ಯಾತ್ರೆ ತೊಡಗಬೇಕು ಸರ್ವಾಂತರ್ಯಾಮಿ ಆ ಅನಂತ ಚೇತನದರಿವು, ಆ ಚಿರಂತನ ಸತ್ಯ ಕಣ್ತುಂಬಬೇಕು || 2 || ಒಳ ಹೊರಗಿನಲೂ ಹರಿವ […]
ನಮನ ನಿನಗೆ ಕನ್ನಡ ತಾಯೆ | ಅರ್ಪಿಸುವೆ ಮೊದಲ ತೊದಲ ನುಡಿಗಳ ಮಾಲೆ || ಲೋಕ ಲೋಕ ವಿನುತ ಕವಿ ಕುಲ ಸಂಪ್ರೀತೆ | ಹೃದಯ ತುಂಬಿ ನಾ ಪೊಡಮಡುವೆ ತಾಯೆ ನಿನಗೆ || ಪ || ಪಂಪನ ನೃಪತುಂಗನ ನುಡಿ ಕನ್ನಡ | ರನ್ನಪೊನ್ನ ಜನ್ನರ ಸವಿಗನ್ನಡss || ಮುದ್ದಣ ಕುಮಾರವ್ಯಾಸ ಕನ್ನಡ | ಮುಗ್ಧ ಜನರ ಮುದ್ದು ಭಾಷೆ ಕನ್ನಡ || ಭಾವದ ಅಂಗಳಕೆ | ಭಾಷೆಯ ಹೊಂಬೆಳಕೆ || ಕರ್ನಾಟಕ ಜನಮನದೊಲವೇ || 1 || […]
ಅ ಆ ಇ ಈ, ಅ ಆ ಇ ಈ ಕನ್ನಡದಾ ಅಕ್ಷರಮಾಲೆ ಅಮ್ಮಾ ಎಂಬುದೇ ಕಂದನ ಕರುಳಿನ ಕರೆಯೋಲೆ || ಪ || ಆಟ ಊಟ ಓಟ ಕನ್ನಡ ಒಂದನೇ ಪಾಠ ಕನ್ನಡ ಭಾಷೆಯ ಕಲಿತವನಿಗೆ ಜೀವನವೇ ರಸದೂಟ || 1 || ಇ ಈ ಇದ್ದವರೆಲ್ಲ ಇಲ್ಲದವರಿಗೆ ನೀಡಲೇಬೇಕು ಈಶ್ವರನಲ್ಲಿ ಎಂದೂ ನಂಬಿಕೆ ಇಡಬೇಕು || 2 || ಉ, ಊ ಉಪ್ಪು ತಿಂದ ಮನೆಗೆ ಎರಡು ಬಗೆಯಬೇಡ ಊರಿಗೆ ದ್ರೋಹ ಮಾಡಿ ಬದುಕಲೆಣಿಸಬೇಡ […]
ಅಮೂರ್ತ ಮೂರ್ತ ಮೂರ್ತಿಮಂತ ನಿನ್ನೊಲು ನಾವಾಗಲಿ ನಿನ್ನ ನಡೆಯ ನೆಲೆಯನಾಂತು ದೇಶಕಾರ್ಯ ತೊಡಗಲಿ || ಪ || ಮೊಗ್ಗು ಮೊಗವು ಬಿರಿಬಿರಿಯೆ ಹಿಡಿಹೂಗಳು ತಾವರಳಲಿ ದಿವ್ಯಗಂಧವೆಲ್ಲ ಹರಡಿ ಅವನಿಯು ಪರಿಮಳಿಸಲಿ || 1 || ಪುಷ್ಪಫಲದ ವಾಂಛೆಯಳಿದು ಸಮರ್ಪಣೆಯ ಭಾವ ತಳೆದು ಧ್ಯೇಯದೇವನೆದುರಿನಲ್ಲಿ ಸ್ವಾರ್ಥ ಹೋಮವಾಗಲಿ || 2 || ಲೋಕಸೇವಾ ಭಕ್ತಿ ಭಾವ ಎಂಬುದೊಂದೇ ಧ್ಯೇಯ ದೇವ ನಿರತ ಪೂಜೆಯಿಂದ ದೇವ ನಿನ್ನ ರೂಪ ದೊರೆಯಲಿ || 3 || ದಿವ್ಯ ಭವ್ಯ ರಾಷ್ಟ್ರಜ್ಯೋತಿ ನಿನ್ನ […]