ನನಸಾಗಿಹುದು ಕೇಶವ ಕಂಡಿಹ ಕನಸಿನ ಹಿಂದೂರಾಷ್ಟ್ರವು | ದೇಶ ಬಾಂಧವರನೊಂದುಗೂಡಿಸಿದೆ ಹಿಂದುತ್ವದ ಈ ಸೂತ್ರವು || ಪ || ಸೃಷ್ಟಿಯು ನೀಡಿದ ವರದಾನವಿದು ವಿಂಧ್ಯ ಹಿಮಾಚಲ ಸಾಗರವು | ತಾಯ್ನೆಲವೆಮ್ಮದು ಧರ್ಮ ಸಂಸ್ಕೃತಿಯ ಅನುಪಮ ಕಲೆಗಳ ಆಗರವು || 1 || ಕೆಚ್ಚೆದೆ ಶೂರರ ಚರಿತ್ರೆಯೆಮಗಿರೆ ಜೀವನ ದರ್ಶನ ಗೀತೆಯಲಿ | ಮನುಕುಲದೇಳ್ಗೆಯೆ ಗುರಿಯಾಗಿಹುದು ಸಾಗಿಹೆವಾ ಸತ್ಪಥದಲ್ಲಿ || 2 || ಸಂಘದ ಮಂತ್ರವ ಜಪಿಸಿ ನಿರಂತರ ಧ್ಯೇಯದ ಪಥದಲಿ ಸಾಗುವೆವು | ಭಾರತ ಭೂಮಿಯ ಶ್ರೇಷ್ಠತೆಯನ್ನು […]