ಪರಶಿವಾಲಯ ವರ ಹಿಮಾಲಯ ಜ್ವಲಿಸು ಒಡಲಿನ ಜ್ವಾಲೆಯ ಹಿರಿಮೆ ಮಹಿಮೆಯ ಓ ನಗಾಧಿಪ ದಹಿಸು ನಾಡಿನ ವೈರಿಯ || ಪ || ಸತ್ತು ಮಲಗುತ ನೆತ್ತರಿತ್ತರು ಎನಿತೊ ಸಾಸಿರ ಯೋಧರು ತಮ್ಮ ನೆಲದೊಳೆ ಹೆಮ್ಮೆ ಛಲದೊಳೆ ಮಾತೆಗರ್ಪಿತರಾದರು ಅತ್ತ ಹೆಣ್ಣಿನ ಕಣ್ಣ ನೀರಿದೆ ಹೆತ್ತ ಒಡಲದು ಚೀರಿದೆ ಸುರಿದ ನೆತ್ತರ ಸೇಡಿನುತ್ತರ ನೀಡಿರೆನ್ನುತ ನರಳಿದೆ || 1 || ವೀರ ದಾಹಿರನೊಡನೆ ಬಾಳಿದ ಸಿಂಧು ದೇಶದೊಳಡಗಿದ ಖಡ್ಗ ಬಂಧುವೆ ಸೀಳು ದಾಸ್ಯವ ಏಳು ಮೇಲಕೆ ನೆಗೆಯುತ ಪೃಥ್ವಿರಾಜನ […]
ಆರದಿಹ ಆದರ್ಶ ಜ್ವಾಲೆಯ ಅರ್ಚಿಸುವೆ ನಾ ದಿನ ದಿನ ಗೊಳಿಸೆ ಸಾರ್ಥಕ ಶ್ರೇಷ್ಠ ಜೀವನ ಅರ್ಪಿಸುವೆ ತನುಮನಧನ || ಪ || ಜ್ಞಾನ ತಪಸಿನ ಪ್ರಭೆಯ ಬೀರುತ ಸಂಜೆ ಮುಂಜಾನೆಗಳಲಿ ನೆಲೆ ಪ್ರಶಾಂತಿಯ ಪರ್ಣಶಾಲೆಯ ಹೋಮ ಧೂಮದ ಮಡಿಲಲಿ ಬೆಳಗಿದಗ್ನಿಯ ನೃತ್ಯ ಜ್ಯೋತಿಯ ಪ್ರತಿನಿಧಿಯೆ ಶಿರವಂದನಾ || 1 || ರಣ ರಣಾಂಗಣದಲ್ಲಿ ಶೌರ್ಯದ ಸ್ಪೂರ್ತಿ ತೆರೆ ತೆರೆಯುಕ್ಕಿಸಿ ದೇಶ ಧರ್ಮದ ಘನತೆ ಗೌರವ ಕೀರ್ತಿ ಕಳಶವ ರಕ್ಷಿಸಿ ಮೆರೆದ ವೀರರ ಹೃದಯ ಪ್ರೇರಣೆ […]