ಗೀತಾ ಗಂಗಾ ಗೋಮಾತಾ | ಜೈಜೈಜೈ ಭಾರತಮಾತಾ || ಪ || ಉತ್ತರದಲ್ಲಿಹ ಹಿಮವಂತ ನಾಡನು ಕಾಯುವ ಬಲವಂತ ಕವಿಸಾಧಕರಿಗೆ ಅನುದಿನವೂ ಅಕ್ಷಯಸ್ಫೂರ್ತಿಯ ಕೊಡುವಾಂತ || 1 || ಸಾಸಿರನದಿಗಳ ಪುಣ್ಯಜಲ ಹರಿದಿದೆ ನಾಡಿನ ಉದ್ದಗಲ | ಸಮೃದ್ಧಿಯ ಸುಧೆಯನು ಉಣಿಸಿ ಈ ನೆಲವನು ಪಾವನಗೊಳಿಸಿ || 2 || ಮನುಜತ್ವದ ಘನಸಾಧನೆಗೆ ಅಮರತ್ವದ ಆರಾಧನೆಗೆ | ಟೊಂಕವ ಕಟ್ಟಿರಿ ಬಂಧುಗಳೆ ಗತವೈಭವ ಮರುಸ್ಥಾಪನೆಗೆ || 3 ||