ಸಂಘಾಷ್ಟಕ ಕಡಲೊಡೆಯ ಪದತೊಳೆವ ಈ ಪುಣ್ಯಭೂಮಿ ಹಿಮನಗವು ಶೋಭಿಸುವ ಈ ದೇವಭೂಮಿ ಹಿಂದುಭೂಮಿಯ ಪದದಿ ಮೂಜಗವೂ ಮಣಿಯೆ ಅನುದಿನವೂ ಜಪಿಸೋಣ ಸಂಘಮಂತ್ರ || 1 || ಜಗದ ಗುರು ತಾನಾಗಿ ವಂದನೆಯ ಗಳಿಸಿ ಚಂದದಿಂದಲಿ ಬೆಳಕಿತ್ತುದೀ ಹಿಂದುರಾಷ್ಟ್ರ ನಂದದೆಯೇ ಮುಂದರಿಯಲೀ ನಂದಾದೀಪ ಒಂದಾಗಿ ಜಪಿಸೋಣ ಸಂಘಮಂತ್ರ || 2 || ಕರಪಿಡಿದು ತಾಯ್ತನವ ಮೆರೆದಿರುವ ನಾಡು ನರಳಾಡಿ ಮರುಗುತಿಹ ಪರಿಯೊಮ್ಮೆ ನೋಡು ಈ ದುಃಖದಿಂದವಳ ಮೇಲೆತ್ತಲೆಂದೇ ಪ್ರತಿದಿನವೂ ಜಪಿಸೋಣ ಸಂಘಮಂತ್ರ || 3 || ನಿಂದಿತರು ಪತಿತರಲಿ […]