ವರವ ಬೇಡುವೆ ಹರಸು ನಮ್ಮ

ವರವ ಬೇಡುವೆ ಹರಸು ನಮ್ಮ| ಭಾರತೀ ಕೊಡು ಕೋಟಿ ಜನುಮ || ಪ || ಶಸ್ತ್ರಕೊಡು ತೋಳಲ್ಲಿ ಬಲವಿಡು| ವೈರಿಕುಲ ಮರ್ದನಕೆ ಛಲಕೊಡು| ವರದೆ ಪಾರ್ವತಿ ತಾಯೆ ನೀಡು| ನಿನ್ನ ಬಸಿರೊಳಸಂಖ್ಯ ಜನುಮ || 1 || ಅನ್ನದಾಯಿನಿ ಜಗನ್ಮಾತೆ| ಜ್ಞಾನದಾಯಿನಿ ದಿವಿಜ ಪೂಜಿತೆ| ಆದಿಶಕ್ತಿ ಸುಧೀರಮಾತೆ| ಮುಕ್ತಿಮಂತ್ರವೆ ನಿನ್ನ ನಾಮ || 2 || ಮಾತೃಭಕ್ತಿ ಪುನೀತಭಾವನ| ದೀಪ್ತಗೊಳ್ಳಲಿ ಸುಪ್ತಚೇತನ| ಚಿರಸಮರ್ಪಿತವೆಮ್ಮ ತನುಮನ| ಚಿರಸಮರ್ಪಿತ ಪೂರ್ಣ ಜೀವನ || 3 ||

Read More

ಆಹಾ ಎಂಥ ಪುಣ್ಯ ಈ ಜನುಮ

ಆಹಾ ಎಂಥ ಪುಣ್ಯ ಈ ಜನುಮ ಓಹೋ ದಿವ್ಯಧಾರಿಣಿಯ ಮಹಿಮ ಇಲ್ಲಿ ವೈಭೋಗ ವೈಭವ ನರ್ತನ ಎನ್ನ ತಾಯಿ ಭಾರತಿಗೆ ನಮನ || ಪ || ನಿನ್ನ ಒಡಲಿನಲಿ ಮಮತೆ ಮಡಿಲಿನಲಿ ಕಡಲ ಬಿತ್ತರದ ಹಿರಿಮೆಗಳು ಭವ್ಯ ಮನಸುಗಳ ರಮ್ಯ ದಿನಿಸುಗಳ ಉನ್ನತ ಸಾಧನೆ ಗರಿಮೆಗಳು || 1 || ಸಮರ ರಂಗದಲಿ ನೇಣುಗಂಬದಲಿ ನೆತ್ತರಿತ್ತ ಬಲಿ ನೆನಪುಗಳು ಯೋಗ ತ್ಯಾಗಗಳ ಕರ್ಮಕಮ್ಮಟದಿ ನುಗ್ಗಿ ಮುಗುಳ್ನಗುವ ಹೊಳಪುಗಳು || 2 || ತತ್ವ ದರ್ಶನದ ಅನುಭವ ಅನುಭಾವ […]

Read More