ಜನನಿ ಭಾರತಿ ಜನ್ಮಧಾತ್ರಿ ದಿವ್ಯ ನಾಡಿದು ಸೋದರಿ ಬಾದರಾಯಣ ಪರಮ ಋಷಿಗಳ ಪುಣ್ಯ ಬೀಡಿದು ಸೋದರ || ಪ || ಎಲ್ಲಿ ರಾಮಾಯಣವು ಬೆಳಗಿತೊ ಎಲ್ಲಿ ಗೀತೆಯ ಸುಧೆಯು ಹರಿಯಿತೊ ವೇದ ಘೋಷಗಳಲ್ಲಿ ಮೊಳಗಿತೊ ಅದುವೆ ಭಾರತ ಸೋದರ ನಮ್ಮ ನಾಡಿದು ಸೋದರಿ || 1 || ಎಲ್ಲಿ ಮೋಹನ ಕೊಳಲನೂದಿದ ಎಲ್ಲಿ ಪರಶಿವ ನರ್ತಿಸಿದನು ವಾಣಿ ಲಕುಮಿ ಗೌರಿ ಗಣಪತಿ ಪೂಜೆಗೊಳ್ಳುವ ನಾಡಿದು ದೇವತೆಗಳಬೀಡಿದು || 2 || ಗಂಗೆ ಯಮುನೆ ತುಂಗಭದ್ರೆ ಸಿಂಧು ಮಹಾನದಿ […]