ಜಯ ಜಯ ಜಯ ಜನ್ಮಭೂಮಿ ಜಯ ಜಯ ಜಯ ಮಾತೃಭೂಮಿ || ಪ || ಆಕಾಶಗಂಗೆ ಇಳಿದು ಬಂದ ಭೂಮಿ ಶ್ರೀ ಕೃಷ್ಣಗೀತೆಯ ಅಮೃತವಿತ್ತ ಭೂಮಿ || ಅ.ಪ || ಸ್ನೇಹದ ಕುಸುಮಮಾಲೆ ಧರಿಸಿದ ಭೂಮಿ ತ್ಯಾಗಿಗಳು ಜನಿಸಿರುವ ಪಾವನ ಭೂಮಿ ವೇದಾಂತ ಸಾರ ವಿಹಾರ ಪುಣ್ಯಭೂಮಿ ಭಾರತಭೂಮಿ ಭಾಸುರಭೂಮಿ || 1 || ಹೈಮಾದ್ರಿ ವಿಂಧ್ಯಗಳ ಉನ್ನತಭೂಮಿ ಕಾವೇರಿ ಗಂಗೆಗಳು ಹರಿಯುವ ಭೂಮಿ ವೇದಾಂತ ಸಾರ ವಿಹಾರ ಪುಣ್ಯಭೂಮಿ ಭಾರತಭೂಮಿ ಭಾಸುರಭೂಮಿ || 2 ||
ಹೇ ಜನ್ಮಭೂಮಿ ಭಾರತ, ಹೇ ಕರ್ಮಭೂಮಿ ಭಾರತ ಹೇ ವಂದನೀಯ ಭಾರತ, ಅಭಿನಂದನೀಯ ಭಾರತ || ಪ || ಜೀವನಸುಮನ ಚಢಾಕರ್ ಆರಾಧನಾ ಕರೇಂಗೇ ತೇರೀ ಜನಮ ಜನಮ ಭರ್, ಹಮ ವಂದನಾ ಕರೇಂಗೇ ಹಮ ಅರ್ಚನಾ ಕರೇಂಗೇ || ಅ.ಪ || ಮಹಿಮಾ ಮಹಾನ ತೂ ಹೈ, ಗೌರವ ನಿಧಾನ ತೂ ಹೈ ತೂಂ ಪ್ರಾಣ ಹೈ ಹಮಾರೀ, ಜನನೀ ಸಮಾನ ತೂ ಹೈ ತೇರೇ ಲಿಯೇ ಜಿಯೇಂಗೇ, ತೇರೇ ಲಿಯೇ ಮರೇಂಗೇ ತೇರೇ […]
ಭಾರತಿ ನಿನ್ನಯ ಅಡಿಗಳಿಗೆ ಪೊಡಮಡುವೆ ನಾ ಅಡಿಗಡಿಗೆ ಜನನಿ ಓ ಜನನೀ ಜನನಿ ಜನ್ಮಭೂಮಿ || ಪ || ಜನ್ಮ ಜನ್ಮದಾ ಪುಣ್ಯದ ಫಲವು ಕರುಣೆಯ ತೋರಿದ ಒಲವಿನ ಬಲವು ಬಂದಿಹೆ ಧರೆಗೆ ನಿನ್ನೊಡಲೊಳಗೆ ಕೋಟಿ ಕೋಟಿ ಜನ ಸೋದರರೆನಗೆ || 1 || ಮೇಲೆ ಹಿಮಾಚಲ ಕಾಲಡಿ ಕಡಲು ಬಂಗಾರದ ನಿಧಿ ತುಂಬಿದ ಒಡಲು ಶ್ರೀಗಂಧದ ಸೌಗಂಧವು ತುಂಬ ಏನೆಂಬೆನು ನೀ ಸ್ವರ್ಗದ ಬಿಂಬ! || 2 || ಉಜ್ವಲ ಕಲೆ ಸಂಸ್ಕೃತಿಗಳ ನಾಡು ಕೆಚ್ಚೆದೆ […]
ಸ್ವರ್ಗಕಿಂತ ಮೇಲು ಜನನಿ ಜನ್ಮಭೂಮಿ ಭಾರತ ವರದೆ ಕಾಯೆ ತಾಯೆ ಇರಲಿ ಒಲವು ರಕ್ಷೆ ಶಾಶ್ವತ || ಪ || ಏರಿ ನಿಂತ ಮೇರು ಗಿರಿಯ ಪಡೆಯು ಗಿರಿಯ ಕಾಯಲು ಮೀರಿ ಮೊರೆವ ಕಡಲು ಮಣಿದು ನಿಂದು ಪಾದ ತೊಳೆಯಲು ಮೆರೆದ ಹಸಿರು ನರ್ತನ – ಮೆರೆಯೆ ದಿವ್ಯದರ್ಶನ || 1 || ಪುಣ್ಯಜಲವ ಹೀರಿ ಫಲವ ನೀಡಿ ನೆಲವು ಪಾವನ ವರ್ಷಧಾರೆ ಸುರಿದು ಬೆಳೆದು ಮಧುರ ಗಂಧ ಕಾನನ ಕುಣಿವ ಝರಿಯ ವೈಖರಿ – ಕಾಣ […]
ಜನನೀ ಜನ್ಮಭೂಮಿ… ಭಾರತಿ ನಿನ್ನಯ ಅಡಿಗಳಿಗೆ ಪೊಡಮಡುವೆ ನಾ ಅಡಿಗಡಿಗೆ ಜನನೀ ಓ ಜನನೀ, ಜನನೀ ಜನ್ಮಭೂಮಿ || ಪ || ಜನ್ಮ ಜನ್ಮದಾ ಪುಣ್ಯದ ಫಲವು ಕರುಣೆಯ ತೋರಿದ ಒಲವಿನ ಬಲವು ಬಂದಿಹೆ ಧರೆಗೆ ನಿನ್ನೊಡಲೊಳಗೆ ಕೋಟಿ ಕೋಟಿ ಜನ ಸೋದರರೆನಗೆ || 1 || ಮೇಲೆ ಹಿಮಾಚಲ ಕಾಲಡಿ ಕಡಲು ಬಂಗಾರದ ನಿಧಿ ತುಂಬಿದೆ ಒಡಲು ಶ್ರೀಗಂಧದ ಸೌಗಂಧವು ತುಂಬ ಏನೆಂಬೆನು ನೀ ಸ್ವರ್ಗದ ಬಿಂಬ || 2 || ಉಜ್ವಲ ಕಲೆ ಸಂಸ್ಕೃತಿಗಳ […]