ಜೈ ಜೈ ಎನುತಾ ಹಿಂದು ಧರ್ಮಕೆ ಜೈ ಎನುತಾ ವಿಶ್ವಧರ್ಮಕೆ ಜೈ ಎನುತಾ ಬನ್ನಿರಿ ಬೆಳಗುವ ಸಂಘಜ್ಯೋತಿಯ ಮನೆ ಮನೆಗಳಿಗೀಗ || ಪ || ನಮ್ಮ ನಾಡಿದು ನಮ್ಮ ಹೊನ್ನಿನ ಬೀಡಿದು ನಮ್ಮ ಹೃದಯವ ಕರೆದಿಹುದು ಜಗವನು ಬೆಳಗಿದ ಋಷಿಗಳ ಆಧ್ಯಾತ್ಮದ ತವರೂರು ಶೌರ್ಯದಿ ಕೆಚ್ಚದಿ ಕಾದಿಹ ವೀರರ ಸ್ಮರಿಸುತ ಸಾಗುವೆವು || 1 || ಪುಣ್ಯಭೂಮಿಯು ಇದುವೆ ಮೋಕ್ಷಭೂಮಿಯು ಶ್ರೇಷ್ಠ ಜೀವನಪದ್ಧತಿಯು ಜಗವನು ಶ್ರೇಷ್ಠತೆಗೊಯ್ಯಲು ನಾವು ಶಪಥವ ಮಾಡುವೆವು ಪವಿತ್ರ ಕಾರ್ಯದ ಸಾಧನೆಗಾಗಿ ತನು ಮನ […]