ಸ್ವಾರ್ಥ ದ್ವೇಷ ನಿರಾಸೆ ಜಾಡ್ಯವ ತೊರೆದು ಮೇಲೇಳ್ ಸೋದರ | ಪ್ರೀತಿ ಗೌರವ ತ್ಯಾಗದಿಂ ಕ – ಟ್ಟೋಣ ಭಾರತ ಮಂದಿರ || ಪ || ಗಾಳಿ ನೀರು ಮಣ್ಣು ಮರಕೆ ನಮ್ಮ ಬೆಳೆಸಿದ ಪ್ರಕೃತಿಗೆ | ಏನ ಕೊಟ್ಟೆವು ತಿರುಗಿ ನಾವು ತ್ಯಾಜ್ಯ ಮಲಿನತೆ ವಿಕೃತಿಯ || 1 || ಸತ್ಯ ಧರ್ಮ ನ್ಯಾಯ ನೀತಿ ತ್ಯಾಗ ನಿಷ್ಠೆಯ ಕಲಿಯದೆ | ಶೌರ್ಯ ಸಾಹಸ ಧ್ಯೇಯ ಮೆರೆಯದ ಬದುಕು ತರವೇ ಬಾಳದೇ || 2 || […]
ಎಚ್ಚರವು ಎಚ್ಚರವು ವೀರಪುತ್ರರೆ ಬೇಗ ಜಾಡ್ಯ ದುಃಸ್ವಪ್ನಗಳ ಕಾಲವು ಕಳೆದಿದೆ ಎಚ್ಚೆತ್ತು ಕಣ್ಣಾಲಿ ಬಿಚ್ಚುತ್ತ ನೋಡೀಗ ಎಲ್ಲೆಲ್ಲು ಜಾಗೃತಿಯು ಜಗಜಗಿಸಿದೆ || ಪ || ಜಾಜ್ವಲ್ಯ ಮಾನವದೋ ನವಸೃಷ್ಟಿಯಾಗುತಿದೆ ದುರ್ನಿಯಮ ದುರ್ದಿನದ ಸುಳವು ಸಲ್ಲ ನವ್ಯ ಶಕ್ತಿಯು ರಕ್ತ ಕಣದಿ ಖಣಖಣಿಸುತಿದೆ ಸ್ವಾತಂತ್ರ ಸೂರ್ಯನಾ ಬೆಳಕಿದೆಲ್ಲಾ ಘೋರ ಗರ್ಜನೆಯಿರಲಿ ದಾನವಾರ್ಭಟವಿರಲಿ ಮಾರಿ ಮೃತ್ಯುವೆ ಮುಂದು ಗುಡುಗುಡಿಸಿ ಬರಲಿ ಮಂಗಲೋತ್ಸವದಂದು ಸಂಗೀತ ಸ್ವರವೆಂದು ಅದನಾಲಿಸುತ ನುಗ್ಗು ನುಗ್ಗುವೆವು ಮುಂದು || 1 || ಶಾಂತಿಯೈ […]