ಮತ್ತೆ ಮೂಡುತಿದೆ ಕತ್ತಲೆದೆಯಿಂದ ಪೌರುಷಮಯ ಇತಿಹಾಸ ಸತ್ತ ಬೂದಿಯಲು ಕಿಡಿಗಳ ತೆರೆಯುವ ಅನಂತತೆಯ ಚಿರಸಾಹಸ || ಪ || ಮನೆಗೆ ಕವಿದ ಇರುಳನು ತೊಳೆದು ಹಗಲ ಹಚ್ಚಿದುದೆ ಸಾಲದೆ ನೆರೆಜನ ಮೊರೆಯಿಡೆ ಕಾದಿ ಗೆಲಿಸಿದೆವು ಊರುಗೋಲಾಗಿ ಬಳ್ಳಿಗೆ || 1 || ಎಂದಿನಿಂದಲೋ ಹರಿದು ಬಂದಿರುವ ಜೀವನ ಧರ್ಮದ ಶ್ರುತಿಗೆ ಇಂದಿನ ಸ್ವರವನ್ನು ಹೊಂದಿಸಿ ಹಾಡುವ ಆಸೆ ಫಲಿಸುತಿದೆ ಬಾಳಿಗೆ || 2 || ಕಂಠ ಕಂಠದಲು ದನಿಗೊಳ್ಳುತ್ತಿದೆ ಶ್ರೀ ಸಾಮಾನ್ಯನ ಜಯಕಾರ ಮೂಲೆ ಮೂಲೆಯಲು ಮೈ […]
ಉಜ್ವಲ ಇತಿಹಾಸ ಎಮ್ಮದು ಭಾರತ ನಾಡಿನ ಸ್ಫೂರ್ತಿಯದು || ಪ || ಪವಿತ್ರ ಧರ್ಮದ ಗೌರವಕಾಗಿ ಮೃತ್ಯುವನಪ್ಪಿದ ಹಕಿಕತನೂ ಗುರುಗೋವಿಂದನ ವೀರ ಸುಪುತ್ರರು ತೆತ್ತರು ಅಸುವನು ಹರುಷದಲಿ ಧೈರ್ಯದಿ ಗೋಡೆಯ ಮಧ್ಯದಲಿ || 1 || ನಾಡಿನ ಗೌರವರಕ್ಷಣೆಗಾಗಿ ಸಹಿಸಿದ ರಾಣನು ಕಷ್ಟವನು ರಜಪೂತರ ನಿಜ ತೇಜವ ತೋರುತ ದೇಶದೊಳಲೆದನು ಕಂಗೆಟ್ಟು ಮಾಡಿದ ಜನತೆಯ […]