ಅಂದು ನೀ ಕಂಡ ಕನಸು

ಅಂದು ನೀ ಕಂಡ ಕನಸು ಇಂದು ಹೆಮ್ಮರವಾಗಿ ಸಂಘರೂಪದಿ ನಿಂದು ಫಲವೀಯುತಿಹುದು ಧರ್ಮದ ನೆಲೆಯಲ್ಲಿ ದೇಶವೆಂಬ ನಿಲುವ ಹೊತ್ತಿದ್ದ ನನ್ನ ಕನಸು ನನಸಾಯಿತಿಂದು || ಪ || ರಾಷ್ಟ್ರದ ಭವಿತವ್ಯ ಯುವಕರ ಕೈಲೆಂದು ಸಾರಿದ ನಿನ್ನ ಊಹೆ ನಿಜವಾಯಿತಿಂದು ಎಂತೆಂಥ ಕಷ್ಟಗಳು ರಾಷ್ಟ್ರಕೇ ಒದಗಿದರೂ ರಾಷ್ಟ್ರೀಯರೇ ನಿಂದು ಪರಿಹರಿಸುತಿಹರು || 1 || ನೀನೊಬ್ಬ ದ್ರಷ್ಟಾರ ಮಾಡಿದೆ ಉದ್ಗಾರ ಭರತಮಾತೆಯ ಸುತರು ರಾಷ್ಟ್ರೀಯರೆಂದು ಒಬ್ಬೊಬ್ಬ ರಾಷ್ಟ್ರೀಯ ಸ್ವಯಂಸೇವಕನೆಂದು ನೀನು ಕೊಟ್ಟ ವ್ರತದೀಕ್ಷೆ ಅಜರಾಮರ || 2 || […]

Read More