ಬೆಚ್ಚನೆಯ ಗೂಡು ಇದು ನೆಚ್ಚಿ ನಾವಿರಲು ಹಚ್ಚ ಹಸಿರಿನ ನೆಳಲು ಬಿಚ್ಚು ಮನವಿರಲು || ಪ || ತುರು ಕರೆವ ತಿಳಿಹಾಲು ಹೊಳೆಹರಿದುನಿಂದು ತರುತಂಪು ತಿಳಿಗಾಳಿ ಒಳಸಾರಿ ಬಳಿಬಂದು ತಮವಡಗಿ ಇಳೆಬೆಳಗಿ ಕಳೆಕಟ್ಟಿತಿಲ್ಲಿಂದು ತರವಿಲ್ಲ ಗೃಹಗೇಹದೊಳಗಿಂತ ಮತ್ತೊಂದು || 1 || ಪಡುವಣದ ರವಿಕಿರಣ ಪೂರ್ವದಿಂದಲೆ ಪಯಣ ಅಡಿಮೊದಲು ಮನೆಯಲ್ಲಿ ಆತನೊಂದಿಗೆ ಗಮನ ಮಡಿಯಾಗಿ ಮನಕಾಯ ಹೊಸಿಲುಗೋವಿಗೆ ನಮನ ಅಡಿಗೆರಗಿ ಶ್ರೀತುಳಸಿ ತೀರ್ಥ ಅಮೃತಪಾನ || 2 || ಬಗೆಬಗೆಯ ರಸಭಾವ ಶುಚಿರುಚಿಯ ಸಾರ ಹಗೆಹೊಗೆಯ ಜಾಡಿಲ್ಲ […]