ವಾದಗಳ ಸೆರೆ ಬಿಡಿಸಿ, ಭೇದಗಳ ತೆರೆ ಸರಿಸಿ ತೆರೆದುಬಿಡು ಹೃದಯದ್ವಾರ, ಬರಲಿ ಬಿಡು ಕದಿರ ನೇರ || ಪ || ಹಳ್ಳಿಹಳ್ಳಿಯ ಬದಿಯ, ಹಳ್ಳಕೊಳ್ಳವೆ ಯಮುನೆ ಜೀವನದಿಯಾದಾಳು, ಭಾವಜಲವೆರೆದಾಗ ದನಗಾಹಿ ಬಾಲಕರು, ರಾಷ್ಟ್ರರಥ ಚಾಲಕರು ಆದಾರು ಬೆಳೆದಾರು ಧ್ಯೇಯಜಲವೆರೆದಾಗ || 1 || ತರುಣಗಣ ತಲೆ ಎತ್ತಿ ನಿಂತಾಗ ತೋಳೆತ್ತಿ ಬೆಟ್ಟಬೆಟ್ಟವನೆತ್ತಿ ಸಹ್ಯಾದ್ರಿ ಮೈ ಎತ್ತಿ ಇರುಳಕೋಟೆಯು ಕರಗಿ ಮೂಡುವನು ವಿಜಯರವಿ ಹಾಡುವನು ಜಯಗಾನ ಚಿರವಿಹಾರಿ ಸಮೀರ || 2 || ಮೈಮರೆತ ಮಾನವರ ಮಣ್ಣುಗೊಂಬೆಯ ಹಿಡಿದು […]