ಹೊಮ್ಮುತಿದೆ ಹೊಸಬೆಳಕು ಹಿಂದು ಬಾಂದಳದಲ್ಲಿ ಚಿಮ್ಮಿಸುತ ನವಸ್ಫೂರ್ತಿ ಹಿಂದು ಬಾಂಧವರಲ್ಲಿ || ಪ || ಧ್ಯೇಯ ರವಿಕಿರಣಗಳು ತುಂಬಿಸಿವೆ ತರುಣರೊಳು ಕುಂದದಿಹ ಉತ್ಸಾಹ ಸಾಧನೆಯ ವ್ಯಾಮೋಹ ಕಾಯವನು ಶ್ರೇಯಯುತ ಕಾಯಕಕೆ ಕಾದಿರಿಸಿ ಅರಳುತಿದೆ ಯುವಶಕ್ತಿ ನೋಡಿರಿಲ್ಲಿ || 1 || ಸತ್ತು ಮಲಗಿಹ ಛಲವು ಮತ್ತೆ ತಲೆ ಎತ್ತಿಹುದುs ಸುತ್ತಲಿನ ಶತ್ರುಗಳ ಪಡೆಯ ಧರೆಗೊತ್ತಿಹುದು ಹತ್ತು ದಿಕ್ಕುಗಳಲ್ಲೂ ಬಿತ್ತರಿಸಿ ರಣಘೋಷ ದೃಢತೆಯಿಂ ಮುನ್ನುಗ್ಗಿ ಜಗವ ಗೆಲ್ಲಿ || 2 || ಕುರುಡು ರೂಢಿಯ ರಾಡಿ ನಾಡಿನಿಂ ಹೊರದೂಡಿ […]