ಸಿಂಧು ಸಂಸ್ಕೃತಿಯಲ್ಲಿ ಸಿರಿ ಪರಂಪರೆಯಲ್ಲಿ ಹಿಂದು ಹೆಸರಲಿ ನಾವು ಬಂದೆವಿಳೆಗೆ ಸಂದ ಕಾಲವನೆಳೆದು ಇಂದು ಯಶ ಸಾಧಿಸಲು ಬಂದಿಹುದು ಶುಭ ಸಮಯ ನಮ್ಮ ಬಳಿಗೆ || ಪ || ಒಡೆದು ಶಂಖಧ್ವನಿಯ ಗುಡುಗು ನೂರ್ಮಡಿಗೊಂಡು ಸಿಡಿಸಿಡಿದು ಸೀಳಾಗಿ ಸ್ವೀಕರಿಪ ಮೊದಲೇ ಬಡವ ಅಂತ್ಯಜರೆಂಬ ತಡೆಗೋಡೆಗಳು ಬೆಳೆದು ದುಡುಕಿ ವಿಷನಾಗಗಳು ಫೂತ್ಕರಿಪ ಮೊದಲೇ ಹುಡುಕಿ ಓರೋರ್‍ವರನು ನಿಜವಿಕಾಸಕೆ ತರಲು || 1 || ವಿಸ್ಮೃತಿಯ ಕರಿಮುಗಿಲು ಪ್ರಗತಿಪಥವನು ಕವಿದು ಪಶ್ಚಿಮಕೆ ಸೋತವರ ಅನುಸರಿಸದೇ ಆತ್ಮರತಿಯಲಿ ಮುಳುಗಿ ಆರ್ತರನು ಕಡೆಗಣಿಸಿ […]