ಏಳಿ ಎದ್ದೇಳಿ, ಹಿಂದುತ್ವ ಮೈತಾಳಿ, ಏಳಿ ಎದ್ದೇಳಿ ಸತ್ಯರತ ಸರ್ವಹಿತ ಹಿಂದುತ್ವದಮರ ಪಥ || ಪ || ತಮ್ಮದೇ ದಿಟವೆಂಬ ವಿವಿಧ ವಾದವಿವಾದ ಕಪಟ ವಂಚನೆ ಕ್ರೌರ್ಯ ದಾಸ್ಯ ದಮನದ ಪರ್ವ ದ್ವೇಷ ಸಂಘರ್ಷಗಳ ಹಾಲಾಹಲವ ಕುಡಿದು ಸಹಿಸಿ ಸಾವನು ಗೆದ್ದ ನೀಲಕಂಠನ ತೆರದಿ ಮತ್ತೆ ಮೇಲೆದ್ದಿಹುದು ಅಮರ ಹಿಂದುತ್ವ || 1 || ಸುಖದಾಸೆ ಮಿತಿಮೀರಿ ಭುವಿಯೊಡಲ ಬಿಸಿಯೇರಿ ಪರಿಸರವು ಹದಗೆಡಲು ಜೀವಕುಲ ನಲುಗಿರಲು ತ್ಯಾಗತಪಗಳ ಸರಳ ಸಹಜ ಜೀವನ ನಡೆಸಿ ನಾಕವನು ಮೀರಿಸುವ ಧರೆಯನಾಗಿಸಲೆಂದು […]