ಹೇ ಗುರುವೇ ನಿನ್ನಡಿಗೆ

ಹೇ ಗುರುವೇ ನಿನ್ನಡಿಗೆ ಅನುದಿನವು ಮಣಿಯುವೆನು ಎದೆಗೊತ್ತಿ ಶಿರಸವರಿ ನೀನೆನ್ನ ಹರಸು        || ಪ || ನನ್ನಿರವ ತಿಳಿಸಿಕೊಡು ನನ್ನರಿವು ನನಗೆ ಕೊಡು ಒಳಗಿನರಿಗಳ ತರಿವ ಪರಿಯೆನಗೆ ಕಲಿಸು      || 1 || ಜಗವ ರಂಜಿಸಬಲ್ಲ ಸಪ್ತ ಸ್ವರಗಳನುಲಿಸು ಎನ್ನೆದೆಯ ವೀಣೆಯನು ಸಿದ್ಧಗೊಳಿಸು          || 2 || ಭಾರತಿಯ ಜೊತೆಗೆನ್ನ ಹೃದಯಶ್ರುತಿ ಮೇಳವಿಸು ಸಮರಸದ ಸಂಗೀತ ಸೃಷ್ಟಿಗೊಳಿಸು         || 3 || ಕೀರ್ತಿ ಕಾಂಚನಗಳಿಗೆ ಅಲೆವ ಮನವನು ನಿಲಿಸು ಮರೆವಿನಾ ತೆರೆ ಸರಿಸು ಬೆಳಕ ಹರಿಸು         || 4 || ಸ್ವಚ್ಛಂದ ಮನಕಿಂದು […]

Read More