ಮುನಿಸು ತೊರೆದು ಹರುಷ ತೋರು

ಮುನಿಸು ತೊರೆದು ಹರುಷ ತೋರು ನಮ್ಮ ತಾಯಿ ಭಾರತೀ ಹರಸು ನಮ್ಮ ಶಿರವ ಪಿಡಿದು ತರುವೆವಮ್ಮ ಕೀರುತಿ || ಪ || ಹೊಂಚು ಹಾಕಿ ಹಿರಿಯಲೆಂದು ಅಡಗಿ ಕುಳಿತ ಅರಿಗಳು ಬಿಡುವೆವೇನು ಕಡಿವೆವಲ್ಲೆ ನಾವು ಧೀರ ಮಕ್ಕಳು ಚೆನ್ನಮ್ಮ ಲಕ್ಷ್ಮೀ ನಾವೇ ಕ್ಷಾತ್ರ ತೇಜ ಕುಡಿಗಳು || 1 || ಪ್ರತಿ ಗೃಹದ ಒಳಗಿನಿಂದ ಕೇಳುತ್ತಿದೆ ಮೊಳಗು ಭೈರವಿಯ ಶಕ್ತಿಧರಿಸಿ, ತರುವೆವು ಬೆಳಗು ಬೇಡವೆಮಗೆ ಸ್ವತ್ವವಿರದ ವಿದೇಶೀಯರ ಬೆಡಗು ಸ್ವದೇಶ ಭಾಷೆ ವಸ್ತ್ರವೆಮಗೆ ಎಂದೆಂದೂ ಸೊಬಗು || […]

Read More