ಹರಯದ ಗುಡುಗುಗಳು ಸಿಡಿಲ ತೆರೆಗಳು ನಾವು ಗುರಿಯೆಡೆಗೆ ಛಲದ ಅಡಿಯಿಡುವವರು ಎಚ್ಚೆತ್ತ ಮನಬಲದಿ ಸಾಧನೆಗೆ ತನು ಬಳಸಿ ಚೈತನ್ಯ ಪಥದಲಿ ದಿಟ್ಟ ನಡೆಯುವವರು || ಪ || ಬಾಳುವೆಯ ಕಣದಲ್ಲಿ ಗುಂಡಿಗೆಯ ಪಣವಿರಿಸಿ ಪಾಂಚಜನ್ಯವ ಸ್ಮರಿಸಿ ಸೆಣಸುವವರು ಸಿಂಧು ಸಲಿಲದ ಬಯಲು ತರುಣ ಹುರುಪಿನ ಹುಯಿಲು ವೈರಿ ಪೀಳಿಗೆ ಎಣಿಸಿ ಮಣಿಸುವವರು || 1 || ಅಂಜುವೆದೆ ನಮ್ಮದಲ್ಲ ಹಿಂಜರಿಕೆ ಬಯಸಿಲ್ಲ ತೃಣವಾಗಿಸಿ ಅಸುವ ಕಸುವಿರುವವರು ಕಂಡಿಹೆವು ಮರಣವನು ಮಸಣದೆಡೆ ಯಾತ್ರೆಯನು ಅಳಿವಿರದ ಗೆಲುವಲಿ ಮಸಕಾಗದವರು || […]