ಧ್ಯೇಯ ಮಹಾದೇವನೆ ವಂದನೆ ನೀ ಹರಸುತಲಿರು ಸ್ವೀಕರಿಸುತಲಿರು ವಿಕಸಿತ ಜೀವನವಿರಿಸುತ ತಲೆ ಬಾಗುವೆನು || ಪ || ನಿನ್ನ ಹಿಮಾಲಯದುನ್ನತ ನೆಲೆಗೆ, ಹಬ್ಬಲು ಹೊರಟಿಹ ಬಾಳಿನ ಲತೆಗೆ ಎಲೆಗೊಂದೊಂದರಳಿಸು ಗುಣ ಮಲ್ಲಿಗೆ, ನಾ ಪೂರ್ಣ ಸಮರ್ಪಿತನು || 1 || ಕರಗಿಸು ಮೋಹದ ಮಂಜಿನ ಮಾಯೆ, ಕಳಚಿ ಬಿಡುವೆ ಭಯಭೀತಿಯ ಛಾಯೆ ವಾಮನನು ತ್ರಿವಿಕ್ರಮನಾಗೇಳುವೆ, ಅಳೆಯುವೆ ನೆಲಗಗನವನು || 2 || ಮೆರೆದಾಡುವ ಜನ ಕಂಟಕ ಬಲಿಯ, ಮದವೇರಿದ ಅಧಿಕಾರದ ತಲೆಯ ಮೆಟ್ಟಲು ಬಿಡದರಸುವೆ ಪದವೆತ್ತುತ, ಕಾಣಿಸೆ […]