ಆಶ್ವಯುಜ ಶುದ್ಧ ಮಹಾನವಮಿ ಬರಲೆಂದು ಲೇಸಾಗಿ ಹರಸಿದೆವು ಬಾಲಕರು ಬಂದು || ಪ || ಗಣಪತಿಯ ಪದತಲಕೆ ಶರಣು ಶರಣೆಂದು ನವದುರ್ಗೆ ಜಗಕೆಲ್ಲ ಶುಭವ ತರಲೆಂದು ಈಶ ನಿಮಗತ್ಯಧಿಕ ಫಲವ ಕೊಡಲೆಂದು ವಿಜಯ ದಶಮಿಯು ನಮಗೆ ಜಯವ ತರಲೆಂದು || 1 || ಮಳೆ ಹೊಯ್ದು ಬೆಳೆ ಬೆಳೆದು ಇಳೆ ತಣಿಯಲೆಂದು (ಮಳೆ ಬಂದು ಬೆಳೆ ಬೆಳೆದು ಧರೆ ತಣಿಯಲೆಂದು) ಧನಕನಕ ಗೋಭಾಗ್ಯ ನಿಮಗೊದಗಲೆಂದು ಸಾವಯವದಿಂದನ್ನ ನಮಗೊದಗಲೆಂದು ಹೂ ಕೋಲ ದರುಶನದಿ ಶುಭವು ನಿಮಗೆಂದು || 2 || […]
ಹೊಸಮಾನದ ಶತಮಾನದ ಹಾಡು ಮಾರ್ದನಿಸುತಲಿದೆ ದೆಸೆದೆಸೆಗೆ ಮಾನವತೆಗೆ ಹಿಂದುತ್ವವೆ ಶಿರ ಏರುತ ಬಾ ಹೊಸ ಸಾಧನೆಗೆ ಹಿಂದೂ ಧರ್ಮಾರಾಧನೆಗೆ || ಪ || ಋಷಿಗಳ ಉಸಿರಲಿ ಸತ್ಯವೆ ಬದುಕು ದೊರೆವುದರಿವು ಬೆಳಕು ನಶಿಸಲಿ ನಡೆಯಲಿ ವಿರಸದ ಪಲುಕು ಸಮರಸತೆಯ ಬದುಕು ಸಂಗಚ್ಛಧ್ವಂ ಮಂತ್ರದ ಧ್ವನಿಯು ಮಾರ್ದನಿಸುತಲಿದೆ ದೆಸೆದೆಸೆಗೆ ಮಾನವತೆಗೆ ಹಿಂದುತ್ವವೆ ಶಿಖರ ಏರುತ ಬಾ ಹೊಸ ಸಾಧನೆಗೆ ಹಿಂದೂ ಧರ್ಮದಾರಾಧನೆಗೆ || 1 ||