ಉನ್ನತೋಜ್ವಲ ಗುರುಸ್ವರೂಪಿಯೆ ಧ್ವಜ ನಮೋ ಚಿರಸ್ಪೂರ್ತಿದಾತಾ || ಪ || ಹೃದಯ ಸಾಗರದರುಣ ಜಲದಲಿ ಭಾವಕಮಲದ ಅಗ್ನಿಕಾಂತಿ ಧ್ಯೇಯ ಭಾಸ್ಕರನುದಯ ಕಾಲದಿ ಅರಳಿ ದಲದಲ ತಾನೆ ಪ್ರಣತಿ ಭಕ್ತಿಯಲಿ ಶುಚಿ ತಳೆದು ನಿಂತ, ದೀಕ್ಷೆಯಲಿ ಅಚಲತೆಯನಾಂತ ಬಾಳಸೌಧದ ಭವ್ಯ ಶಿಖರದ ತ್ಯಾಗಸ್ತಂಭದ ತುದಿಗೆ ಸ್ವಾಗತ || 1 || ತಾಯ್ಧರೆಯ ಪ್ರೀತಿಯಲಿ ಯುವಜನ ಒಂದುಗೂಡುತ […]