ಭಾರತದಾಲಯ ಬಿರಿಯುತಿದೆ

ಭಾರತದಾಲಯ ಬಿರಿಯುತಿದೆ ಗೃಹದೊಡತಿಯ ಕಣ್ಣುರಿಯುತಿದೆ || ಪ || ವಾಯವ್ಯದ ದ್ವಾರದ ಹಿಮಪಂಕ್ತಿಯ ರಂಗೋಲೆ ವನರಾಜಿಯ ತೋರಣದುಯ್ಯಾಲೆ ವೈರಿಯ ಪದಘಾತಕೆ ಕರಸೆಳೆತಕೆ ಸಿಲುಕುತಲೆ ಹುಡಿಯಾಗುರುಳಿದೆ ಮಣ್ಣಿನ ಮೇಲೆ ! || 1 || ನಂಬಿಕೆ ನಿದ್ದೆಯ ದ್ರೋಹದ ದಾಳಿಯು ಕಡಿವ ಪರಿ ಕೈದಿಯದೋ ಹಿಮಶಿಖರದ ಪ್ರಹರಿ; ಬುಟ್ಟಿಯೊಳೇಳುವ ನಾಗರ ನಿಟ್ಟುಸಿರನು ಮೀರಿ ಏರಿಳಿಯುತಲಿದೆ ಸಿಂಧೂಲಹರಿ ! || 2 || ಚಿತ್ರಾಂಗದೆ ಚರಿಸಿದ ರವಿಯುದಯದ ಸೀಮೆಯಲಿ ಧರ್ಮಜನನುಜಗೆ ಧಿಕ್ಕಾರದುಲಿ ! ಕ್ರಾಂತಿಯ ನೆಲೆ ಗಂಗಾ ತೀರದ ಬಂಗಾಲದಲಿ […]

Read More