ಆರದಿಹ ಆದರ್ಶ ಜ್ವಾಲೆಯ ಅರ್ಚಿಸುವೆ ನಾ ದಿನ ದಿನ ಗೊಳಿಸೆ ಸಾರ್ಥಕ ಶ್ರೇಷ್ಠ ಜೀವನ ಅರ್ಪಿಸುವೆ ತನುಮನಧನ || ಪ || ಜ್ಞಾನ ತಪಸಿನ ಪ್ರಭೆಯ ಬೀರುತ ಸಂಜೆ ಮುಂಜಾನೆಗಳಲಿ ನೆಲೆ ಪ್ರಶಾಂತಿಯ ಪರ್ಣಶಾಲೆಯ ಹೋಮ ಧೂಮದ ಮಡಿಲಲಿ ಬೆಳಗಿದಗ್ನಿಯ ನೃತ್ಯ ಜ್ಯೋತಿಯ ಪ್ರತಿನಿಧಿಯೆ ಶಿರವಂದನಾ || 1 || ರಣ ರಣಾಂಗಣದಲ್ಲಿ ಶೌರ್ಯದ ಸ್ಪೂರ್ತಿ ತೆರೆ ತೆರೆಯುಕ್ಕಿಸಿ ದೇಶ ಧರ್ಮದ ಘನತೆ ಗೌರವ ಕೀರ್ತಿ ಕಳಶವ ರಕ್ಷಿಸಿ ಮೆರೆದ ವೀರರ ಹೃದಯ ಪ್ರೇರಣೆ […]