ವೀರ ಘೋಷಣೆ ವೀರಘರ್ಜನೆ

ವೀರ ಘೋಷಣೆ ವೀರಘರ್ಜನೆ ಗೈಯ್ಯೆ ವಿಜಯೋಪಾಸನೆ ಶಕ್ತಿ ಇಲ್ಲದೆ ಮುಕ್ತಿಯಿಲ್ಲವು ಇದು ಚರಿತ್ರೆಯ ಬೋಧನೆ || ಪ || ಒಬ್ಬರಾಗುತ ಒಬ್ಬದೇವರು ಹುಟ್ಟಿ ಬಂದರು ಬಂದರು ಸಾಧುಪುರುಷರು ವೀರಪುರುಷರು ಬಂದು ಹೋದರು ಹೋದರು ಗೊಡ್ಡು ಮನದಲಿ ಅಡ್ಡಬಿದ್ದೆವು ನಮ್ಮಡಿಯ ಹಿಂದಿಟ್ಟೆವು ಹೂವುಹಣ್ಣನು ಕೊಟ್ಟು ಅವರನು ಮುಂದೆ ಸಾಗಿಸಿ ಬಿಟ್ಟೆವು || 1 || ಉದ್ಧರೇದಾತ್ಮನಾತ್ಮಾನಮ್ ನಾವೇ ಪಠಿಸಿದುದಲ್ಲವೇ? ಕೋವಿ ಕತ್ತಿಯನಿಟ್ಟು ಸುಮ್ಮನೆ ನಾವೆ ಪೂಜಿಸಲಿಲ್ಲವೇ? ಪೂಜೆ ಏತಕೆ ಪಠನವೇತಕೆ ಗೈದೆವೆಂಬುದ ಬಲ್ಲೆವೇ? ಶಸ್ತ್ರವೇತಕೆ ಶಾಸ್ತ್ರವೇತಕೆ ಎಂಬುದನು ಮರೆತಿಲ್ಲವೇ? […]

Read More