ಎನ್ನೆದೆಯ ಕದ ತೆರೆದು ಹೃನ್ಮನವ ಹದಗೊಳಿಸಿ

ಎನ್ನೆದೆಯ ಕದ ತೆರೆದು ಹೃನ್ಮನವ ಹದಗೊಳಿಸಿ ಜಗದ ಹಿತದಾಕಾಂಕ್ಷೆ ಬೀಜ ಬಿತ್ತಿ ಧನ್ಯಗೊಳಿಸಿದೆ ಬದುಕು ಪುಣ್ಯವಂತನು ನಾನು ಕಣ್ತೆರೆಸಿದ ತಾಯೇ ನಿನಗೆ ನಮನ              || ಪ || ಭೋಗಕಿರಲೊಂದು ಮಿತಿ ತ್ಯಾಗದಿಂದಮೃತತ್ವ ಸ್ವಂತ ಸುಖವನು ಮರೆತ ಸಂತವಾಣಿ ಸ್ವಾರ್ಥ ಚಿಂತನೆ ತ್ಯಜಿಸಿ ತನು-ಧನಗಳನರ್ಪಿಸಿದೆ ಮನವೆಲ್ಲಿ ಕಾಣಿಸದು ನಿನ್ನೊಳಗೆ ಲೀನ          || 1 || ಘನ ಪರಂಪರೆ ಇಹುದು ಶೌರ್ಯ-ಸಾಹಸಕಿಲ್ಲಿ ಪಾರ್ಥನಿಗೆ ಸಾರ್ಥಕತೆ ರಣದ ಕಣದೀ ಛತ್ರಪತಿಯ ಕಥನ ರಾಣ ನಡೆಸಿದ ಕದನ ವಿಜಯನಗರದ ಸ್ಮರಣ ಹೃದಯ ಸ್ಫುರಣ        || 2 […]

Read More

ವಾದಗಳ ಸೆರೆ ಬಿಡಿಸಿ

ವಾದಗಳ ಸೆರೆ ಬಿಡಿಸಿ, ಭೇದಗಳ ತೆರೆ ಸರಿಸಿ ತೆರೆದುಬಿಡು ಹೃದಯದ್ವಾರ, ಬರಲಿ ಬಿಡು ಕದಿರ ನೇರ || ಪ || ಹಳ್ಳಿಹಳ್ಳಿಯ ಬದಿಯ, ಹಳ್ಳಕೊಳ್ಳವೆ ಯಮುನೆ ಜೀವನದಿಯಾದಾಳು, ಭಾವಜಲವೆರೆದಾಗ ದನಗಾಹಿ ಬಾಲಕರು, ರಾಷ್ಟ್ರರಥ ಚಾಲಕರು ಆದಾರು ಬೆಳೆದಾರು ಧ್ಯೇಯಜಲವೆರೆದಾಗ || 1 || ತರುಣಗಣ ತಲೆ ಎತ್ತಿ ನಿಂತಾಗ ತೋಳೆತ್ತಿ ಬೆಟ್ಟಬೆಟ್ಟವನೆತ್ತಿ ಸಹ್ಯಾದ್ರಿ ಮೈ ಎತ್ತಿ ಇರುಳಕೋಟೆಯು ಕರಗಿ ಮೂಡುವನು ವಿಜಯರವಿ ಹಾಡುವನು ಜಯಗಾನ ಚಿರವಿಹಾರಿ ಸಮೀರ || 2 || ಮೈಮರೆತ ಮಾನವರ ಮಣ್ಣುಗೊಂಬೆಯ ಹಿಡಿದು […]

Read More