ಹಿಂದು ಸಾಗರವೆ ದೆಸೆಯ ಬದಲಿಸಿದೆ ಏನಿದೆಂಥ ಮೋಡಿ ಉಕ್ಕಿ ಮೊರೆಯುತಿವೆ ಕೋಟಿ ಅಲೆಗಳು ತಾಯಿ ಸ್ತುತಿಯ ಪಾಡಿ ವೀರ ಸಂತತಿಯ ಆವೇಶ ತನುಗಳಲಿ ಪುಡಿ ಪುಡಿಯು ಎಲ್ಲಾ ಬೇಡಿ ಬಿಂದು ಬಿಂದುವೂ ಇಂದು ಒಂದೆನುವ ಒಮ್ಮತವೆ ಜೀವನಾಡಿ || ಪ || ಇರುಳ ಸರಿಸುತಾ ಬಂದ ಬೆಳಗಿಂದು ಒಸಗೆ ತಂದಿಹಳು ಇಳೆಗೆ ವಿಶ್ವ ಮುಕುಟದ ಸರದಿ ಮೀಸಲು ತಾಯಿ ಭಾರತಿಯ ಶಿರಕೆ ಜಡತೆ ಝಾಡಿಸಿ ಛಲದಿಂದ ದುಡಿಯುವ ದಿಟ್ಟ ಹೃದಯಗಳ ಹರಕೆ ದುರುಳರೆದೆಗಳ ಸೀಳಿ ಮಾತೆಗೆ ಜಯಮಾಲೆ […]