ರಣದುಂದುಭಿಯ ಕರೆ ಕೇಳುತಿದೆ ಏಳಿ ಎದ್ದೇಳಿ ನವಭಾರತವು ಮೈತಾಳುತಿದೆ ಜಡತೆಯ ಪೊರೆ ಸೀಳಿ ಏಳಿ ಎದ್ದೇಳಿ || ಪ || ಮಾತೃಭಕ್ತಿಯ ಸಂಘಶಕ್ತಿಯ ಕಾರ್ಯದಿ ತೊಡಗಿಸುವ ಶತ್ರುಕೂಟಗಳ ಉಗ್ರಗಾಮಿಗಳ ಅಬ್ಬರ ಅಡಗಿಸುವ || 1 || ಶೌರ್ಯಧೈರ್ಯಗಳ ಶಸ್ತ್ರವ ಪಿಡಿದು ಸಮರಕೆ ಸಜ್ಜಾಗಿ ಮಾತೃಭೂಮಿಯ ಅದ್ವಿತೀಯತೆಯ ರಕ್ಷಿಸಲೊಂದಾಗಿ || 2 || ಛತ್ರಪತಿಯ ಆದರ್ಶವೆಮಗಿರೆ ಇನ್ನೇತರ ಅಳುಕು? ರಾಷ್ಟ್ರ ರಕ್ಷಣೆಯ ಧ್ಯೇಯಸಿದ್ಧಿಗೆ ಅದುವೇ ಮುಂಬೆಳಕು || 3 || ಚರಿತೆ ಸಾರಿದೆ ಸ್ವಾಭಿಮಾನದ ಸ್ಫೂರ್ತಿಯ ಇತಿಹಾಸ ಮೊಳಗಲೆಲ್ಲೆಡೆ […]
ಏಳಿ ತರುಣ ಸೋದರರೇ ತೊಡೆದು ಜಡತೆ ಗೀಳನು ಎಳೆವ ಬನ್ನಿ ಭರತ ಮಾತೆ ಕುಳಿತ ರಾಷ್ಟ್ರ ತೇರನು || ಪ || ಆಧುನಿಕತೆ ಆಡಂಬರ ಉಸಿರ ಕಸಿವ ಆವರ್ತನ ಸಿಲುಕಿ ಸೋತು ನರಳದಿರಲಿ, ಬಡಿದೆಬ್ಬಿಸಿ ಚೇತನ ಬಳಲಿಬೆಂದ ಬಂಧುಗಳಿಗೆ ನೀಡಿ ಹೃದಯ ಸ್ಪಂದನ ಏಕತೆಯಲಿ ಬಾಳಲದುವೆ ಹಿಂದು ಸುಧೆಯ ಮಂಥನ || 1 || ನೋಡಿ ನಿಮ್ಮ ನಗುವರಿರಲಿ ದೂರ ಸರಿಸಿ ಅಂಜಿಕೆ ಸಂಸಾರದ ಗ್ರಂಥಕವರ ಬಿಡದೆ ಮಾಡಿ ಸಂಚಿಕೆ ಕಾರ್ಯವಿದು ವ್ಯರ್ಥವಲ್ಲ ವಿಜಯಕದುವೆ ಕಂಟಿಕೆ ಮನುಜ […]
ಏಳಿ ಎದ್ದೇಳಿ, ನಿಲ್ಲದಿರಿ ಗುರಿಮುಟ್ಟುವ ತನಕ ಏಳಿ ಎದ್ದೇಳಿ || ಪ || ಭಾರತಮಾತೆಯ ಪ್ರೀತಿಯ ಮಕ್ಕಳು ನಿದ್ರಾಪರವಶರಾಗಿಹರು ನಿದ್ರಿಸುತಿರುವೀ ಬಂಧುವನೆಲ್ಲಾ ನಾವೆ ಎಚ್ಚರಗೊಳಿಸಲೇಬೇಕು || 1 || ಮಾತೃಭೂಮಿಯ, ದೇಶಧರ್ಮದ ಭ್ರಾತೃಭಾವವ ಕ್ಷಾತ್ರ ತೇಜವ ಮರೆತು ನಿದ್ರಿಸುತಿರುವೀ ಬಂಧುವ ನಾವೇ ಎಚ್ಚರಗೊಳಿಸಲೇಬೇಕು || 2 || ಪ್ರಾಂತ ಭೇದದಿ, ಪಕ್ಷ ಭೇದದಿ, ಜಾತಿ ಭೇದದಿ ಭಾಷಾ ಭೇದದಿ ಜಗಳವನಾಡುತಲಿರುವೀ ಜನರನು ನಾವೇ ಎಚ್ಚರಗೊಳಿಸಲೇಬೇಕು || 3 || ನಿದ್ದೆಯ ಮಾಡುವ, ಸಮಯವಿದಲ್ಲವು ಜಾಗೃತಿಗೈಯುವ ಪರ್ವಕಾಲವಿದು ಹಿಂದುಬಂಧುಗಳೆಲ್ಲರನು […]