ಭಾರತಾಂಬೆಯ ವೀರಕುವರರೆ ಏಳಿ ಎದ್ದೇಳಿ ನಾಡದೇವಿಯ ತೇರನೆಳೆಯಲು ಸ್ವಾಭಿಮಾನದಲಿ ॥ ಒಗ್ಗೂಡಿ ಒಂದಾಗಿ ಸಾಗೋಣ ಚೆಂದಾಗಿ ಹಿಗ್ಗುತ್ತ ಮುಂದಾಗಿ ನಾವೆಂದಿಗೂ ॥ ಸೋಲು ಗೆಲುವು ನೋವು ನಲಿವು ಒಂದೇ ಭಾವದಿ ಸ್ವೀಕರಿಸಿ ॥ ಅಂತಿಮ ವಿಜಯದ ಸಾಧನೆಗಾಗಿ ಸಂಕಲ್ಪವ ಧರಿಸಿ ॥ (ಪ್ರಾಂತ ಘೋಷ್ ಶಿಬಿರದ ಶಿಬಿರ ಗೀತೆ)
ಏಳಿ ಎದ್ದೇಳಿ, ಹಿಂದುತ್ವ ಮೈತಾಳಿ, ಏಳಿ ಎದ್ದೇಳಿ ಸತ್ಯರತ ಸರ್ವಹಿತ ಹಿಂದುತ್ವದಮರ ಪಥ || ಪ || ತಮ್ಮದೇ ದಿಟವೆಂಬ ವಿವಿಧ ವಾದವಿವಾದ ಕಪಟ ವಂಚನೆ ಕ್ರೌರ್ಯ ದಾಸ್ಯ ದಮನದ ಪರ್ವ ದ್ವೇಷ ಸಂಘರ್ಷಗಳ ಹಾಲಾಹಲವ ಕುಡಿದು ಸಹಿಸಿ ಸಾವನು ಗೆದ್ದ ನೀಲಕಂಠನ ತೆರದಿ ಮತ್ತೆ ಮೇಲೆದ್ದಿಹುದು ಅಮರ ಹಿಂದುತ್ವ || 1 || ಸುಖದಾಸೆ ಮಿತಿಮೀರಿ ಭುವಿಯೊಡಲ ಬಿಸಿಯೇರಿ ಪರಿಸರವು ಹದಗೆಡಲು ಜೀವಕುಲ ನಲುಗಿರಲು ತ್ಯಾಗತಪಗಳ ಸರಳ ಸಹಜ ಜೀವನ ನಡೆಸಿ ನಾಕವನು ಮೀರಿಸುವ ಧರೆಯನಾಗಿಸಲೆಂದು […]
ಏಳಿ ಎದ್ದೇಳಿ ಅಮೃತಾತ್ಮರಾದವರೆ || ಪ || ಏಳಿ ಜಾಗೃತಗೊಳ್ಳಿ ಚೈತನ್ಯಶಾಲಿಗಳೆ || ಅ.ಪ || ಹಿಮಗಿರಿಯ ಮಡುವಿನಲಿ ಘನವಿಷದ ಹೆಬ್ಬಾವು ಬುಸುಗುಟ್ಟಿ ಬಾಯ್ಬಿಟ್ಟು ತಲೆ ಎತ್ತಿದೆ ಕಾಶ್ಮೀರ ಸರಹದ್ದಿನಲ್ಲಿ ಕಾರ್ಕೋಟಕವು ವಿಷಕಾರುತಾ ತಲೆಯ ಮೇಲೆತ್ತಿದೆ ಆ ಫಣಿಗಳ ಫಣಿ ತುಳಿದು ನರ್ತನವನಾಡೋಣ ಕಾಳಿಂದ ಮರ್ದನನ ಕುಲಜರಾವು || 1 || ಭರತವಂಶದ ಪುತ್ರರಾವು ಕೇಸರಿ ಇರಲಿ ಹಲ್ಲುಗಳನೆಣಿಸೇವು ಭಯವಿಲ್ಲದೆ ವಿಷದ ಲಡ್ಡುಗೆಯನ್ನು ತಿಂದು ಕರಗಿಸಿದಂತ ಭೀಮಬಲರಾವೆನ್ನಿ ಭಯವಿಲ್ಲದೆ ಬನ್ನಿ ಹೋರಾಟಕ್ಕೆ ದೇಶದೇಳ್ಗೆಯ ನಡೆಸಿ ನಿತ್ಯಕರ್ಮದ ಚಕ್ರ […]