ಸುತರೆದೆಯಾಳದಿ ಸ್ಪಂದನವೇಳಲಿ ಏಳಲಿ ಪ್ರತಿ ಭಾರತಪ್ರೇಮಿ ಸೀಮಾ ವಲಯದಿ ರಕ್ಷಿತವಾಗಲಿ ಅಂಗುಲ ಅಂಗುಲವೀ ಭೂಮಿ || ಪ || ಸಹ್ಯಾದ್ರಿಯ ಗಿರಿ ಕಂದರ ಕಾನನ, ಹಿಮವತ್ಪರ್ವತದುನ್ನತ ಸ್ಥಾನ ಗಂಗಾಭಗಿನಿಯ ಸಿಂಧೂ ಜಲಧಿಯ, ಸಂಗಮ ಹಿಂದು ಮಹೋದಧಿಗಾನ ಹಾರೈಸಲಿ ಹರಸಲಿ ದಿಗ್ವಿಜಯಕೆ, ಜನಮನವಿಂದಾಗಲಿ ರಣಗಾಮಿ || 1 || ಬಾಹುದ್ವಯಕೇರಲಿ […]
ಆ ಸ್ವತಂತ್ರ ಸ್ವರ್ಗಕೆ ನಮ್ಮ ನಾಡು ಏಳಲೇಳಲೇಳಲೇಳಲಿ || ಪ || ಎಲ್ಲಿ ಮನವು ನಿರ್ಭಯದಿ ತಲೆಯನೆತ್ತಿ ನಿಲುವುದೋ ಎಲ್ಲಿ ಜ್ಞಾನ ಸುಧಾಪಾನ ಎಲ್ಲರಿಗೂ ಸಿಗುವುದೋ || 1 || ಎಲ್ಲಿ ಮನೆಯ ಅಡ್ಡಗೋಡೆ ಇಲ್ಲದೆಯೆ ವಿಶಾಲವೋ ಎಲ್ಲಿ ಮಾತು ಸತ್ಯದಾಳದಿಂದ ಹೊಮ್ಮಿ ಬರುವುದೋ || 2 || ಎಲ್ಲಿ ಸತತ ಕರ್ಮ ಪೂರ್ಣಸಿದ್ಧಿ ಪಡೆದು ಮೆರೆವುದೋ ಎಲ್ಲಿ ತಿಳಿವು ಕಟ್ಟಳೆಯ ಮಳಲ ತೊರೆದು ಹರಿವುದೋ || 3 || ಎಲ್ಲಿ ನೀನು ನಮಗೆ ಧೈರ್ಯ ಎಲ್ಲಿ […]